ಡೇಂಘಿ ಬಗ್ಗೆ ಭಯ ಬೇಡ, ಇರಲಿ ಎಚ್ಚರ

ಈ ಸುದ್ದಿಯನ್ನು ಶೇರ್ ಮಾಡಿ

dengue

ಡೆಂಘಿ ವೈರಸ್‍ನಿಂದ ಹರಡುವ ಒಂದು ಸೋಂಕು ರೋಗವಾಗಿದೆ. ರಚನೆಯಲ್ಲಿ ಅಲ್ಪಪ್ರಮಾಣದ ವ್ಯತ್ಯಾಸವಿರುವ ಈಉಘ್ಖೆ1,ಈಉಘ್ಖೆ2, ಈಉಘ್ಖೆ3, ಈಉಘ್ಖೆ4 ಎಂಬ ನಾಲ್ಕು ವಿಧದ ವೈರಸ್‍ಗಳಿಂದ ಹರಡುತ್ತದೆ.

ಇದು ಹೇಗೆ ಹರಡುತ್ತದೆ :

ಇದು ಮನುಷ್ಯನಿಗೆ ಈಡೀಸ್ ಎಂಬ ಡೇಂಘಿ ಪೀಡಿತ ಹೆಣ್ಣು ಸೊಳ್ಳೆ ಕಡಿಯುವುದರಿಂದ ಹರಡುತ್ತದೆ.

ಈಡೀಸ್ ಸೊಳ್ಳೆ ಹೇಗಿರುತ್ತದೆ :

ಇದು ನೋಡಲು ಸಾದಾ ಸೊಳ್ಳೆಗಳಂತೆ ಸ್ವಲ್ಪ ಮಟ್ಟಿಗೆ ಭಿನ್ನವಾಗಿರುತ್ತದೆ. ಅಂದರೆ ಈ ಸೊಳ್ಳೆಯ ಮೈಮೇಲೆ ಕಪ್ಪು-ಬಿಳಿ ಬಣ್ಣದ ಪಟ್ಟೆ / ಗೆರೆಗಳಿರುತ್ತವೆ. ಆದ ಕಾರಣ ಇವುಗಳನ್ನು ಟೈಗರ್ ಸೊಳ್ಳೆಗಳು ಅಂತ ಅಡ್ಡಹೆಸರಿನಿಂದ ಸಹ ಕರೆಯಲಾಗುತ್ತದೆ. ಸಾಮಾನ್ಯವಾಗಿ ಇವು ಹಗಲಲ್ಲಿ ಮಾತ್ರ ಕಚ್ಚುತ್ತವೆ.

ನಿಮಗಿದು ಗೊತ್ತೆ..? 

ಹೆಣ್ಣು ಸೊಳ್ಳೆ ಮಾತ್ರ ತನ್ನ ಮೊಟ್ಟೆಗಳನ್ನು ಇಡುವ ಪ್ರೋಟಿನ್‍ಗಾಗಿ ಮಾತ್ರ ನಮ್ಮನ್ನು ಕಚ್ಚುತ್ತವೆ.  ಇವುಗಳು ಸೋಂಕಿತ ವ್ಯಕ್ತಿಗೆ ಕಚ್ಚಿದಾಗ ಆತನಿಂದ  ರೋಗಾಣು ಇವುಗಳಿಗೆ ಹರಡುತ್ತವೆ ಹಾಗೂ ಇದು ಸಾಯುವವರೆಗೂ ರೋಗಾಣುಗಳನ್ನು ತನ್ನೊಂದಿಗೆ ಇಟ್ಟುಕೊಂಡಿದ್ದು, ಈ ಸೊಳ್ಳೆ ಕಚ್ಚುವ ಎಲ್ಲಾ ವ್ಯಕ್ತಿಗಳಿಗೂ ಸೋಂಕು ಹರಡಿಸುತ್ತವೆ.

ಮತ್ತೊಂದು ಭಯಾನಕ ಸತ್ಯ ಎಂದರೆ ಒಮ್ಮೆ ಸೋಂಕಿಗೆ ಒಳಗಾದ ಸೊಳ್ಳೆ ಸೋಂಕಿತ ಸೊಳ್ಳೆಯಾಗಿಯೇ ಉಳಿಯುತ್ತದ್ದಲ್ಲದೆ ತಾನು ಇಡುವ ಮೊಟ್ಟೆಗಳಿಗೂ ಇದರ ಸೋಂಕನ್ನು ತಲುಪಿಸುವ ಮೂಲಕ ಆ ಮೊಟ್ಟೆ ಹುಟ್ಟುವಾಗಲೇ ಸೋಂಕಿತ ಸೊಳ್ಳೆಯಾಗಿ ಹುಟ್ಟಿ ಮತ್ತೆ ರೋಗ ಪಸರಿಸುತ್ತದೆ.  ಸಾಮಾನ್ಯವಾಗಿ ಈ ಸೊಳ್ಳೆ ಸೂರ್ಯ ಹುಟ್ಟುವ ಮತ್ತು ಮುಳುಗುವ ಎರಡು ಗಂಟೆ ಮುಂಚಿತವಾಗಿ ಮನುಷ್ಯನಿಗೆ ಕಡಿಯುತ್ತದೆ.   ಈ ಸೊಳ್ಳೆಯ ಜೀವಿತ ಅವಧಿ ಎರಡು ವಾರಗಳು ಮಾತ್ರ. ಆದರೆ, ಈ ಸೊಳ್ಳೆಗಳು ತಮ್ಮ ಜೀವಿತ ಅವಧಿಯಲ್ಲಿ ಮೂರು ಬಾರಿ ಮೊಟ್ಟೆ ಇಡುತ್ತವೆ. ಒಮ್ಮೆಲೆ ಸುಮಾರು ನೂರು ಮೊಟ್ಟೆಗಳನ್ನು ಇಡುತ್ತವೆ.
ದುರಂತ ಅಂದರೆ ಈ ಸೊಳ್ಳೆಗಳು ಇಡುವ ಮೊಟ್ಟೆ ಇದರಿಂದ ಹುಟ್ಟುವ ಮರಿ ಸೊಳ್ಳೆಗಳು ಕೂಡ ಸೋಂಕಿತ ಸೊಳ್ಳೆಗಳಾಗುತ್ತವೆ. (ಮೊಟ್ಟೆ ಒಡೆದ ಮರಿಗಳಿಗೆ ಗಾಳಿ, ನೀರು, ಆಹಾರ ಮತ್ತು ಸೂಕ್ತ ಉಷ್ಣತೆ ಬೇಕು) ಆದರೆ, ಈ ಮೊಟ್ಟೆಗಳು ಹಲವು ತಿಂಗಳು ಕಾಲ ಇರುತ್ತವೆ. ನೀರು ಸಿಕ್ಕಾಗ ಅಂದರೆ ಸಾಮಾನ್ಯವಾಗಿ ಮುಂಗಾರು ಮಳೆ ಅಥವಾ ಪ್ರವಾಹ ಸಂದರ್ಭದಲ್ಲಿ ಮೊಟ್ಟೆಯೊಡೆದು ಬಂದು ಮತ್ತೆ ಡೆಂಘಿ ಸೋಂಕಿತ ಸೊಳ್ಳೆಗಳಾಗಿ ಮನುಷ್ಯನನ್ನು ಬಾಧಿಸುತ್ತವೆ.

ಇವು ಸಾಮಾನ್ಯವಾಗಿ ಮನೆಯ ಕ್ಲಾಸೆಟ್ಸ್, ಕರ್ಟನ್, ಮಂಚದ ಕೆಳಗೆ, ವಾರ್ಡ್‍ರೋಬ್ ಹೀಗೆ ಕತ್ತಲು ಜಾಗಗಳಲ್ಲಿರುತ್ತವೆ. ಆದರೆ, ಇವುಗಳು ಹಾರಾಡುವ ಮತ್ತು ಪಸರಿಸುವ ದೂರ ಬಹಳ ಕಡಿಮೆ, ಕೇವಲ 400 ಮೀಟರ್. ಸೊಳ್ಳೆಗಳಿಗಿಂತ ಹೆಚ್ಚಾಗಿ ಪ್ರದೇಶ ಮತ್ತು ಸಮುದಾಯಗಳ ಮಧ್ಯೆ ಸೋಂಕು ಹರಡಿಸುವುದು ಹೆಚ್ಚಾಗಿ ಮನುಷ್ಯನೇ ಯಾವಾಗಲೂ ಅಲೆದಾಡುವುದರಿಂದ ಆ ಪ್ರದೇಶದ ಒಂದು ಸೊಳ್ಳೆ ಸೋಂಕಿತವಾದರೆ ಅಲ್ಲಿಗೆ ಎಲ್ಲಾ ಮುಗಿಯಿತು.)
ಮನೆಯಲ್ಲೇ ಇವು ಹೆಚ್ಚಾಗಿ ಬೆಳೆಯುತ್ತವೆ. ಅದು ಬಿಟ್ಟು ಕೊಚ್ಚೆನೀರು, ಚರಂಡಿ ಮತ್ತು ನದಿ, ತೊರೆಗಳಲ್ಲಿ ಇವು ಮೊಟ್ಟೆ ಇಡಿವುದಿಲ್ಲ. ಇವಕ್ಕೆ ಶುದ್ಧ ನೀರು, ಒಳ್ಳೆ ಜಾಗಗಳೇ ಬೇಕು.
ಹಾಗಾದರೆ ಇದರ ಸೋಂಕನ್ನು ಹೇಗೆ ತಡೆಗಟ್ಟಿಕೊಳ್ಳಬಹುದು..? 

ಹಗಲು ವೇಳೆ ಮಾತ್ರ ಸೊಳ್ಳೆ ಕಚ್ಚುವುದರಿಂದ ಅದರಲ್ಲೂ ಸೂರ್ಯೋದಯ, ಸೂರ್ಯಾಸ್ತದ ವೇಳೆ ಹೆಚ್ಚು ಎಚ್ಚರ ವಹಿಸಬೇಕು.
ಪೂರ್ತಿ ತೋಳಿನ ಉಡುಪು ಧರಿಸುವುದು ಸೂಕ್ತ.  ಸೊಳ್ಳೆಪರದೆ, ಕಿಟಕಿಗಳಿಗೆ ಪರದೆ, ಸೊಳ್ಳೆ ಬತ್ತಿಗಳನ್ನು ಬಳಸುವುದು.
ಡೇಂಘಿ ಲಕ್ಷಣಗಳು : 

ಜ್ವರ ಕಾಣಿಸಿಕೊಂಡ ಎರಡರಿಂದ ಏಳು ದಿನಗಳಲ್ಲಿ ಈ ಕೆಳಕಂಡ ಯಾವುದಾದರೂ ಎರಡು ಲಕ್ಷಣಗಳು ಕಂಡು ಬಂದರೆ ಹೆಚ್ಚು ಜಾಗರೂಕತೆಯಿಂದ ಇರಬೇಕು.
ತೀವ್ರ ತಲೆನೋವು, ಕಣ್ಣು ಗುಡ್ಡೆಯಲ್ಲಿ ನೋವು, ಸ್ನಾಯು ಸೆಳೆತ(ಮೈ-ಕೈ ನೋವು), ಕೀಲು ನೋವು, ಚರ್ಮ ಕೆಂಪಾಗುವುದು, ಮೂಗು ಮತ್ತು ವಸಡುಗಳಲ್ಲಿ ರಕ್ತಸ್ರಾವ.

ಈ ಲಕ್ಷಣಗಳು ಕಂಡು ಬಂದರೆ ಏನು ಮಾಡುವುದು..? 

ವಿಶ್ರಾಂತಿ ಬಹಳ ಮುಖ್ಯ, ಅತಿ ಮುಖ್ಯವಾಗಿ ಅಸ್ಪ್ರಿನ್ ಮತ್ತು ಬ್ರೂಫಿನ್‍ನಂತಹ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಅವಶ್ಯಕತೆ ಇದ್ದರೆ ವೈದ್ಯರ ಸಲಹೆ ಪಡೆಯಬೇಕು. ( ಇವುಗಳು ಗ್ಯಾಸ್‍ಸ್ಟ್ರಿಕ್, ವಾಂತಿ ಮತ್ತು ರಕ್ತಸ್ರಾವಕ್ಕೆ ಕಾರಣವಾಗುತ್ತವೆ)   ಪ್ಯಾರಾಸಿಟಮಲ್ ಮಾತ್ರೆಗಳನ್ನು ಉಪಯೋಗಿ ಸಬಹುದು. (ಅವಶ್ಯಕತೆ ಇದ್ದರೆ ವೈದ್ಯರ ಸಲಹೆ ಪಡೆಯುವುದು). ಯಥೇಚ್ಚ ನೀರು, ಎಳೆನೀರು, ಓಆರ್‍ಎಸ್ ದ್ರಾವಣ ಸೇವನೆ. ರೋಗಕ್ಕಿಂತ ಹೆಚ್ಚು ನಿರ್ಜಲಿಕರಣದಿಂದ ಅಪಾಯ. ಅತಿ ಹೆಚ್ಚು   ಬೆವರು ಬರುವುದರಿಂದ ರಕ್ತದೊತ್ತಡ ಕಡಿಮೆಯಾಗಿ ಸಾವು ಸಂಭವಿಸುತ್ತದೆ. ಹೆಚ್ಚು ದ್ರವ ಆಹಾರ ಸೇವನೆ ಉತ್ತಮ.
ಸೊಳ್ಳೆಗಳಿಂದ ದೂರವಿರಿ, ವೈದ್ಯರನ್ನು ಭೇಟಿ ಮಾಡಿ
ಡೆಂಘಿಯಿಂದ ನಾವು ಸಾಯುತ್ತೇವೆಯೇ ? 

ಸಾಮಾನ್ಯವಾಗಿ ಈ ರೋಗದಿಂದ ಸಾವು ಸಂಭವಿಸುವುದು ಅತಿ ವಿರಳ. ಆದರೆ, ಕೆಲವೊಬ್ಬರಿಗೆ ಡಿಎಚ್‍ಎಫ್(ಈಛ್ಞಿಜ್ಠಛಿ ಏಛಿಞಟ್ಟ್ಟeZಜಜ್ಚಿ ಊಛಿqಛ್ಟಿ) ಅಥವಾ ಡಿಎಸ್‍ಎಸ್  ಆಗಿ ಸಾವನ್ನಪ್ಪಬಹುದು. ಇಂತಹ ರೋಗಿಗಳಿಗೆ ಮಾತ್ರ ಒಳರೋಗಿಯಾಗಿ ಚಿಕಿತ್ಸೆ ಕೊಡುವ ಅವಶ್ಯಕತೆ ಇದೆ. ಆದ್ದರಿಂದ ತಡ ಮಾಡದೆ ಆಸ್ಪತ್ರೆಗೆ ದಾಖಲಿಸಬೇಕು. ಸರಿಯಾದ ಮತ್ತು ಸಮಯೋಚಿತ ಚಿಕಿತ್ಸೆಯಿಂದ ರೋಗಿಗಳನ್ನು ಗುಣಪಡಿಸಬಹುದು.
ಅತಿ ಜರೂರು : 

ತುಂಬಾ ಹೊಟ್ಟೆನೋವು, ಚರ್ಮದ ಮೇಲಿನ ಕೆಂಪುಗುಳ್ಳೆ ಅಥವಾ ಮಚ್ಚೆ, ಬಾಯಿ ಅಥವಾ ಮೂಗಿನಿಂದ ರಕ್ತಸ್ರಾವ, ರಕ್ತ ಮಿಶ್ರಿತ ವಾಂತಿ, ಕಪ್ಪುಬಣ್ಣದ ಮಲ ವಿಸರ್ಜನೆ, ತುಂಬಾ ಸಪ್ಪೆಯಾಗಿ ವರ್ತಿಸುವುದು, ತಣ್ಣಗಾದ ಅಥವಾ ಒಣ ಚರ್ಮ, ಉಸಿರಾಟಕ್ಕೆ ತೊಂದರೆ.  ಇಂತಹ ಸಂದರ್ಭದಲ್ಲಿ ಮಾಡಬೇಕಾದದ್ದು  ಪ್ರತಿಗಂಟೆಗೊಮ್ಮೆ ರೋಗಿ ತಪಾಸಣೆ, ಪ್ಲೇಟ್‍ಲೆಟ್ ಚೆಕ್ ಮಾಡುವುದು, ಇವಿ ಪ್ಯೂಯೆಡ್ಸ್ ಅಥವಾ ಪ್ಲೇಟ್‍ಲೆಟ್ ಮರುಪೂರಣ ಮಾಡಬಹುದು.
ಮನೆಯಲ್ಲೇ ಚಿಕಿತ್ಸೆ ಕೊಡಿಸಬಹುದೇ..? 

ಹೌದು. ಅವರಿಗೆ ಗೃಹಾಧಾರಿತ ಚಿಕಿತ್ಸೆ ಸಾಕು, ದ್ರವ ಆಹಾರ ಹೆಚ್ಚಾಗಿ ನೀಡಬೇಕು ಮತ್ತು ಮೇಲ್ಕಂಡ ತೀವ್ರ ತರಹದ ಲಕ್ಷಣಗಳು ಕಂಡುಬಂದಾಗ ಮಾತ್ರ ಒಳ ರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ ಮತ್ತು ಸಮುದಾಯದ ಆಸಕ್ತಿ , ಸ್ಥಳೀಯ, ನಗರಾಡಳಿತ ಮತ್ತು ಆರೋಗ್ಯ ಇಲಾಖೆಯ ಸಮರೋಪಾದಿ ಜವಾಬ್ದಾರಿಯಿಂದ ಮಾತ್ರ ರೋಗ ತಡೆ ಸಾಧ್ಯ. ಆದ್ದರಿಂದ ನಾವೆಲ್ಲ ಒಟ್ಟಾಗಿ ಕೈ ಜೋಡಿ ಮಹಾಮಾರಿಯನ್ನು ತಡೆಯಬೇಕಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin