ಮಹಿಳೆ ಜೊತೆ ನೃತ್ಯ ಮಾಡಲೆತ್ನಿಸಿದ ಜೆಡಿಯು ಮುಖಂಡನ ಪುತ್ರನ ಕಗ್ಗೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Murder-01

ಪಾಟ್ನಾ, ಜು.5-ವಿವಾಹ ಸಮಾರಂಭವೊಂದರಲ್ಲಿ ಕೆಲವು ಮಹಿಳೆಯರ ಜೊತೆ ನೃತ್ಯ ಮಾಡಲು ಯತ್ನಿಸಿದ ಸಂಯುಕ್ತ ಜನತಾದಳ (ಜೆಡಿಯು) ಮುಖಂಡನ ಪುತ್ರನೊಬ್ಬನನ್ನು ಭೀಕರವಾಗಿ ಕೊಂದಿರುವ ಘಟನೆ ಬಿಹಾರದ ಸಿವಾನ್ ಜಿಲ್ಲೆಯ ಬದುಶಿ ಗ್ರಾಮದಲ್ಲಿ ನಡೆದಿದೆ. ಹತ್ಯೆಗೀಡಾದ ಕರ್ಣಕುಮಾರ್ ಸುಮನ್ (24) ಸಿವಾನ್ ಜಿಲ್ಲೆಯ ಜೆಡಿಯು ದಲಿತ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ನಂದಾಲಾಲ್ ರಾಮ್ ಅವರ ಪುತ್ರ. ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಈತ ಒಂದು ಗುಂಪಿನ ಆಕ್ಷೇಪದ ನಡುವೆಯೂ ಮಹಿಳೆಯರೊಂದಿಗೆ ನೃತ್ಯ ಮಾಡಲು ಮುಂದಾದಾಗ ಹರಿತವಾದ ಆಯುಧಗಳಿಂದ ಕೊಲ್ಲಲಾಗಿದೆ ಎಂದು ತಿಳಿದು ಬಂದಿದೆ.

ಘಟನೆ ವಿವರ: ಬದುಶಿ ಗ್ರಾಮದ ವಿವಾಹ ಸಮಾರಂಭವೊಂದರಲ್ಲಿ ಈತ ನೃತ್ಯ ವೇದಿಕೆಗೆ ಏರಿ ಕೆಲವು ನರ್ತಕಿಯರಿಗೆ ಹಣ ಚೆಲ್ಲಿ ಅವರೊಂದಿಗೆ ನರ್ತಿಸಲು ಮುಂದಾದ. ಆಗ ಕೆಲವರು ಇದಕ್ಕೆ ಅಡ್ಡಿಪಡಿಸಿ ಸುಮನ್‍ನನ್ನು ವೇದಿಕೆಯಿಂದ ಕೆಳಗೆ ಇಳಿಸಿದರು. ಈ ಸಂದರ್ಭದಲ್ಲಿ ವಾಗ್ವಾದ ನಡೆದು ಘರ್ಷಣೆಗೆ ಕಾರಣವಾಯಿತು. ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಹರಿತವಾದ ಆಯುಧದಿಂದ ಸುಮನ್ ಮೇಲೆ ಹಲ್ಲೆ ಮಾಡಿದ ತೀವ್ರ ಗಾಯಗೊಂಡ ಆತ ಸಿವಾನ್ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟನೆಂದು ಪೊಲೀಸರು ತಿಳಿಸಿದ್ದಾರೆ. ಹಂತಕರ ಬಂಧನಕ್ಕೆ ಪೆÇಲೀಸರು ವ್ಯಾಪಕ ಬಲೆ ಬೀಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin