ಹೃದಘಾತದಿಂದ ಉಪತಹಸೀಲ್ದಾರ್ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಯಾದಗಿರಿ,ಜು.5- ಉಪಚುನಾವಣೆ ಮತ ಎಣಿಕೆಗೆ ಉಪತಹಸೀಲ್ದಾರ್ ತೆರಳುವ ವೇಳೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಕೆಂಭಾವಿ ಗ್ರಾಮದ ನಿವಾಸಿ ಆನಂದ್(59) ಮೃತಪಟ್ಟ ಉಪತಹಸೀಲ್ದಾರ್.  ಇಂದು ಜಿಲ್ಲೆಯಲ್ಲಿ ಉಪಚುನಾವಣೆಯ ಮತ ಎಣಿಕೆಗೆ ಆನಂದ್ ಅವರು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.  ಇಂದು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಲೆಂದು ಬಸ್ ನಿಲ್ದಾಣಕ್ಕೆ ಬಂದ ವೇಳೆ ಸುರಪುರ ತಾಲ್ಲೂಕಿನ ಬಸ್ ನಿಲ್ದಾಣದಲ್ಲಿ ತೀವ್ರ ಎದೆ ನೋವು ಕಾಣಿಸಿಕೊಂಡು ಹೃದಘಾತವಾಗಿ ಅಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

Facebook Comments

Sri Raghav

Admin