ಆಗಸ್ಟ್ ವೇಳೆಗೆ ಮೋಡ ಬಿತ್ತನೆ : ಕೃಷ್ಣೇಭೈರೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

Cloud-Feeding

ಬಾಗಲಕೋಟೆ, ಜು.6-ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆ ಬಾರದಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದ್ದು , ಆಗಸ್ಟ್ ತಿಂಗಳ ವೇಳೆಗೆ ಮೋಡ ಬಿತ್ತನೆ ಆರಂಭಸಲಾಗುವುದು ಎಂದು ಕೃಷಿ ಸಚಿವ ಕೃಷ್ಣೇಭೈರೇಗೌಡ ತಿಳಿಸಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಬರಗಾಲ ಛಾಯೆ ಆವರಿಸಿದ್ದು , ಮುಂಗಾರು ಮಳೆ ಒಂದು ತಿಂಗಳು ಕಳೆದರೂ ಸರಿಯಾಗಿ ಆಗಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮೋಡ ಬಿತ್ತನೆಗೆ ಚಿಂತನೆ ನಡೆಸಿತ್ತು. ಈಗ ಸಚಿವ ಸಂಪುಟದಲ್ಲಿ ಅನಮೋದನೆ ದೊರೆತಿದೆ ಎಂದು ತಿಳಿಸಿದರು.

ಇದಕ್ಕೆ ಸಂಬಂಧಿಸಿದಂತೆ ನುರಿತ ತಜ್ಞರನ್ನು ಸಂಪರ್ಕಿಸಿ, ವಿದೇಶಿ ವಿಮಾನಯಾನ ಮೂಲಕ ಮೋಡ ಬಿತ್ತನೆ ಮಾಡಲಾಗುವುದು. ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin