ಕದ್ದು 2ನೇ ಮದುವೆಯಾಗಿದ್ದ ರಸಿಕ ಶಿಕಾಮಣಿಗೆ ಮೊದಲ ಹೆಂಡತಿಯಿಂದ ಬಿತ್ತು ಒದೆ..!

ಈ ಸುದ್ದಿಯನ್ನು ಶೇರ್ ಮಾಡಿ

Marriage--01

ತುಮಕೂರು, ಜು.6- ಮೊದಲ ಪತ್ನಿಗೆ ಗೊತ್ತಾಗದಂತೆ 2ನೇ ಮದುವೆಯಾಗಿ ಸಂಸಾರ ಮಾಡುತ್ತಿದ್ದ ಚಲನ ಚೆನ್ನಿಗರಾಯ ರೆಡ್‍ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದು, ಬೆಳ್ಳಂಬೆಳಗ್ಗೆ ಚಳಿ ಬಿಡಿಸಿರುವ ಘಟನೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಯಲ್ಲಾಪುರದಲ್ಲಿ ನಡೆದಿದೆ. ಬೆಸ್ಕಾಂ ನೌಕರ ಮಹೇಶ್ ಎಂಬಾತ ಕಳೆದ 13 ವರ್ಷಗಳ ಹಿಂದೆ ಚಿತ್ರದುರ್ಗ ಮೂಲದ ಅಕ್ಷತಾ ಎಂಬುವರನ್ನು ವಿವಾಹಾಗಿದ್ದ. ಇವರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಮೊದಲ ಹೆಂಡತಿಗೆ ತಿಳಿಯದಂತೆ ಎರಡನೇ ಮದುವೆಯಾಗಿ ಯಲ್ಲಾಪುರದಲ್ಲಿ ವಾಸವಿದ್ದ. ಈ ವಿಷಯ ತಿಳಿದ ಅಕ್ಷತಾ ಹಾಗೂ ಸಂಬಂಧಿಕರು ಬೆಳ್ಳಂಬೆಳಗ್ಗೆ ಮಹೇಶ್ ಹಾಗೂ ಎರಡನೆ ಹೆಂಡತಿ ಆಶಾಳಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

ಮೊದಲನೆ ಹೆಂಡತಿಗೆ ವಿಚ್ಛೇದನ ನೀಡುವ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲದೆ, ಆಕೆಗೆ 12ಸಾವಿರ ರೂ. ಹಣ ನೀಡುತ್ತಿದ್ದೇನೆ. ನಾನು ಅಂಗವಿಕಲ ಎಂದು ನನ್ನನ್ನು ಬಿಟ್ಟು ಹೋಗಿದ್ದಾಳೆ. ಈಗ ನಾಟಕವಾಡಿಕೊಂಡು ಬಂದಿದ್ದಾಳೆ ಎಂದು ಮಹೇಶ ಆರೋಪಿಸಿದ್ದಾನೆ. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin