ಕಾಶ್ಮೀರ ಕಣಿವೆಯಲ್ಲಿ ಇದೆ ವರ್ಷದಲ್ಲಿ 92 ಉಗ್ರರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Terrorist--01

ನವದೆಹಲಿ, ಜು.6-ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ವಿರುದ್ಧ ಸೇನಾ ಕಾರ್ಯಾಚರಣೆ ಮುಂದುವರಿದಿದ್ದು, ಈ ವರ್ಷ ಜುಲೈ 2ರವರೆಗೆ ಒಟ್ಟು 92 ಉಗ್ರರು ಹತರಾಗಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 79 ಆತಂಕವಾದಿಗಳು ಸೇನೆ ಗುಂಡಿಗೆ ಬಲಿಯಾಗಿದ್ದರು. ಜಮ್ಮು ಮತ್ತು ಕಾಶ್ಮೀರದ ಗಡಿ ಭಾಗದಲ್ಲಿ ಉಗ್ರರ ಒಳನುಸುಳುವಿಕೆ ಇಳಿಮುಖವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದ್ದರೂ. ಏಳು ತಿಂಗಳ ಅವಧಿಯಲ್ಲಿ ಬಲಿಯಾದ ಉಗ್ರರ ಸಂಖ್ಯೆಯನ್ನು ಗಮನಿಸಿದರೆ ಹಿಂದಿನ ವರ್ಷಗಳಿಗಿಂತ ಇದು ಆತಂಕಕಾರಿ ಮಟ್ಟದಲ್ಲಿದೆ ಎಂಬುದು ಸಾಬೀತಾಗುತ್ತದೆ.

ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ 2012 ಮತ್ತು 2013ರಲ್ಲಿ ಕಾಶ್ಮೀರದಲ್ಲಿ ಅನುಕ್ರಮವಾಗಿ 72 ಮತ್ತು 67 ಉಗ್ರರು ಸೇನಾ ಕಾರ್ಯಾಚರಣೆಯಲ್ಲಿ ಹತರಾಗಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಎನ್‍ಡಿಎ ಸರ್ಕಾರದ ಅವಧಿಯಲ್ಲಿ 2014ರಲ್ಲಿ 110, 2015ರಲ್ಲಿ 108 ಹಾಗೂ 2016ರಲ್ಲಿ 150 ಭಯೋತ್ಪಾದಕರನ್ನು ಯೋಧರು ಕೊಂದು ಹಾಕಿದ್ದಾರೆ.  ಈ ವರ್ಷ ಜುಲೈ 2ರವರೆಗೆ ಕಾಶ್ಮೀರ ಕಣಿವೆಯಲ್ಲಿ 92 ಉಗ್ರರು ಬಲಿಯಾಗಿದ್ದಾರೆ. ಇದು 2014 ಮತ್ತು 2015ರ ಅಂಕಿ-ಅಂಶಗಳಿಗಿಂತ ಸ್ವಲ್ಪ ಕಡಿಮೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೇನೆ, ಕೇಂದ್ರೀಯ ಪಡೆಗಳು, ರಾಜ್ಯ ಸರ್ಕಾರ ಮತ್ತು ಗುಪ್ತಚರ ಸಂಸ್ಥೆಗಳ ಸಮನ್ವಯತೆ ಮತ್ತು ಸಹಭಾಗಿತ್ವದಿಂದ ಇಷ್ಟು ಸಂಖ್ಯೆಯ ಉಗ್ರರು ಹತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.  ಕಣಿವೆ ರಾಜ್ಯದಲ್ಲಿ ಅಡಗಿರುವ ಭಯೋತ್ಪಾದಕರ ಜಾಡನ್ನು ಪತ್ತೆ ಮಾಡಿ ನಿಗ್ರಹಿಸಲು ಸೇನಾ ಪಡೆಗಳಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin