ಛಗನ್ ಭುಜ್‍ಬಲ್ ಕುಟುಂಬಕ್ಕೆ ಸೇರಿದ 300 ಕೋಟಿ ರೂ. ಬೇನಾಮಿ ಆಸ್ತಿ ಜಪ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Chagan-Bhujbal

ನವದೆಹಲಿ, ಜು.6-ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾಂಗ್ರೆಸ್ ಪಕ್ಷದ (ಎನ್‍ಸಿಪಿ) ನಾಯಕ ಛಗನ್ ಭುಜ್‍ಬಲ್ ಮತ್ತು ಅವರ ಕುಟುಂಬಕ್ಕೆ ಸೇರಿದ 300 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲದೇ, ಹೊಸದಾಗಿ ಜಾರಿಗೆ ಬಂದಿರುವ ಕ್ರಿಮಿನಲ್ ಕಾಯ್ದೆಯಡಿ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸುಮಾರು 50 ನಕಲಿ ಸಂಸ್ಥೆಗಳನ್ನು ಸೃಷ್ಟಿಸಿ ಅವುಗಳ ಹೆಸರಿನಲ್ಲಿ ಬೇನಾಮಿ ವ್ಯವಹಾರಗಳನ್ನು ನಡೆಸಲಾಗಿದೆ ಎಂದು ಆದಾಯ ತೆರಿಗೆ ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ಈಗ ಜೈಲಿನಲ್ಲಿರುವ ಭುಜ್‍ಬಲ್, ಅವರ ಪುತ್ರ ಪಂಕಜ್ ಮತ್ತು ಸೋದರ ಅಳಿಯ ಸಮೀರ್ ಭುಜ್‍ಬಲ್ ಈ ಬೇನಾಮಿ ಆಸ್ತಿಗಳ ಫಲಾನುಭವಿಗಳೆಂದು ಹೆಸರಿಸಲಾಗಿದ್ದು, ಈ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಆದಾಯ ತೆರಿಗೆ ನೋಟಿಸ್‍ನಲ್ಲಿ ತಿಳಿಸಲಾಗಿದೆ.  ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳಲ್ಲಿ ನಾಸಿಕ್‍ನಲ್ಲಿರುವ 80.97 ಕೋಟಿ ರೂ. ಮೌಲ್ಯದ ಗಿರ್ನಾ ಸಕ್ಕರೆ ಕಾರ್ಖಾನೆ ಹಾಗೂ ಮುಂಬೈನ ಸಾಂತಾಕ್ರೂಸ್‍ನ 11.30 ಕೋಟಿ ರೂ. ಮೊತ್ತದ ವಸತಿ ಕಟ್ಟಡವೂ ಸೇರಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin