ಬಿದಿರು ಬೊಂಬಿಗೆ ತಾಯಿಯ ಶವವನ್ನು ಕಟ್ಟಿ, 2 ಕಿ.ಮೀ. ಹೊತ್ತೊಯ್ದ ಮಕ್ಕಳು..!

ಈ ಸುದ್ದಿಯನ್ನು ಶೇರ್ ಮಾಡಿ

Dead-Body

ಗಂಜಮ್, ಜು.6-ಒಡಿಶಾ ರಾಜ್ಯದಲ್ಲಿ ಕಳೆದ ಆಗಷ್ಟ್ ನಲ್ಲಿ ಒಂದೇ ದಿನ ನಡೆದ ಎರಡೂ ಮನಕಲಕುವ ಘಟನೆಗಳನ್ನು ನೋಡಿ ಮಾನವೀಯತೆ ಇರುವ ಜನರು ಮಮ್ಮಲ ಮರುಗಿದ್ದಾಗಲೇ ಮತ್ತೊಂದು ಅಮಾನವೀಯ ಸಂಗತಿ ಮರುಕಳಿಸಿದೆ ಅಂಬ್ಯುಲೆನ್ಸ್ ಲಭಿಸದೇ ತಾಯಿಯ ಶವವನ್ನು ಮಕ್ಕಳು ಬಿದಿರು ಬೊಂಬಿಗೆ ಶವವನ್ನು ಬಟ್ಟೆಯಿಂದ ಕಟ್ಟಿ 2 ಕಿ.ಮೀ. ಹೊತ್ತೊಯ್ದ ಘಟನೆ ನಡೆದಿದೆ.   ಸೊರದಾ ಹೆಲ್ತ್ ಸೆಂಟರ್‍ನಲ್ಲಿ ಮಹಿಳೆಯೊಬ್ಬರು ಮೃತಪಟ್ಟರು. ಶವವನ್ನು ಸಾಗಿಸಲು ಆಂಬ್ಯುಲೆನ್ಸ್ ಅಥವಾ ಯಾವುದೇ ವಾಹನ ಇರಲಿಲ್ಲ. ಹೀಗಾಗಿ ಆಕೆಯ ಮಕ್ಕಳು ಅನ್ಯ ಮಾರ್ಗವಿಲ್ಲದೇ ಹೆತ್ತ ತಾಯಿಯನ್ನು ಕಳೆದಕೊಂಡ ಅಪಾರ ದುಃಖದಲ್ಲಿ ಶವವನ್ನು ಬಿದಿರು ಬೊಂಬುವಿಗೆ ಬಟ್ಟೆಯಿಂದ ಕಟ್ಟಿ 2 ಕಿಮೀ ಹೊತ್ತೊಯ್ಯಬೇಕಾಯಿತು.

ಮಾನವೀಯತೆಯನ್ನೇ ಮರೆತ ಈ ಘಟನೆ ನೋಡಿ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಮನುಷ್ಯತ್ವಕ್ಕಿಂತ ಹಣವೇ ಮುಖ್ಯ ಎಂಬ ಮಾನವನ ಸ್ವಾರ್ಥ ಗುಣಗಳು ಮತ್ತೊಮ್ಮೆ ಸಾಬೀತಾಗಿದೆ. ಇಂಥ ಹೃದಯವಿದ್ರಾವಕ ಘಟನೆಗಳಿಗೆ ಕೊನೆ ಎಂದು?   ಒಡಿಶಾದ ಕಾಳಹಂಡಿ ಜಿಲ್ಲೆಯಲಿ ಬುಡಕಟ್ಟು ಕೋಮಿಗೆ ಸೇರಿದ ದಾನಾ ಸಿಂಗ್ ಮಾಝಿ ಎಂಬ ವ್ಯಕ್ತಿಯ ಹೆಗಲ ಮೇಲೆ ಮೆಚ್ಚಿನ ಮಡದಿ ಅಮಾಂಗ್ ದೇವಿಯ ಶವ ಹೊತ್ತು 12 ಕಿಮೀ ನಡೆದಿದ್ದ.

ಅತ್ತು ಕರೆದರೂ, ಕಾಡಿ-ಬೇಡಿದರೂ ಆಂಬ್ಯುಲೆನ್ಸ್ ಲಭಿಸದ ಕಾರಣ, ತನ್ನ ಪತ್ನಿಯ ಶವವನ್ನು ಹೆಗಲ ಮೇಲೆಯೇ ಹೊತ್ತು ಬುಡಕಟ್ಟು ಕೋಮಿನ ದಾನಾ ಸಿಂಗ್ ಮಾಝಿ. ಈ ಮನಕಲಕುವ ಘಟನೆ ಬೆನ್ನಲ್ಲೇ ಅದೇ ರೀತಿಯ ಇನ್ನೊಂದು ಹೃದಯ ವಿದ್ರಾವಕ ಘಟನೆಯೂ ಇದೇ ಒಡಿಶಾದಲ್ಲಿ ನಡೆದಿತ್ತು. ಶವವನ್ನು ಸಾಗಿಸಲು ಅನುಕೂಲವಾಗುವಂತೆ ಪೌರ ಕಾರ್ಮಿಕರು ಕಾಲಿನಿಂದ ಹೆಣದ ಸೊಂಟ, ಮೂಳೆಗಳನ್ನು ಮುರಿದು ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿ ತುರುಕಿ ಬಿದಿರಿನ ಗಳಕ್ಕೆ ಕಟ್ಟಿ ರಸ್ತೆಯಲ್ಲಿ ಸಾಗಿಸಿದ ಸಂಗತಿ ವರದಿಯಾಗಿತ್ತು.

ಸಲಾಮಾನಿ ಬಾರಿಕ್ ಎಂಬ 76 ವರ್ಷ ವಿಧವೆ ಆ.25ರಂದು ರೈಲಿಗೆ ಸಿಕ್ಕಿ ಮೃತಪಟ್ಟರು. ಒಡಿಶಾದ ಬಾಲಸೋರ್ ಜಿಲ್ಲೆಯ ಸೊರೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕೆಯ ಶವ ಗಂಟೆಗಟ್ಟಲೆ ಅನಾಥವಾಗಿ ಬಿದ್ದಿತ್ತು. ಅದನ್ನು ಸಾಗಿಲು ಬಿದಿರಿನ ಗಳಕ್ಕೆ ಕಟ್ಟಿ ಶವನ್ನು ಹೊತ್ತೊಯ್ಯಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin