ಕೂಲ್ ಕ್ಯಾಪ್ಟನ್ ಧೋನಿ ಫ್ಯಾನ್ಸ್’ಗಾಗಿ ಈ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

DHoni--01

ನವದೆಹಲಿ, ಜು.7- ವೆಸ್ಟ್‍ಇಂಡೀಸ್ ವಿರುದ್ಧದ ಸರಣಿ ಗೆಲುವಿನ ಸಂಭ್ರಮದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಇಂದು 36ರ ಜನ್ಮದಿನದ ಸಂಭ್ರಮ,ಸಡಗರ. ತಮ್ಮ ಕ್ರಿಕೆಟ್ ಜೀವನದುದ್ದಕ್ಕೂ ಭಾರತ ತಂಡಕ್ಕೆ ಹಲವು ಗೆಲುವುಗಳನ್ನು ತಂದುಕೊಟ್ಟಿರುವ ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹಿಗೆ ಕ್ರಿಕೆಟ್‍ನ ರಂಗದ ವಿವಿಧ ಗಣ್ಯರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.  ಮಹಿಯ ಬಗ್ಗೆ ಹುಟ್ಟುಹಬ್ಬದ ಅಂಗವಾಗಿ ಅವರ ಜೀವನದ 36 ಹೈಲೈಟ್ಸ್ ಅಂಶಗಳು ಕೆಳಕಂಡಂತಿದೆ.

1) ಧೋನಿ ಜಾರ್ಖಂಡ್‍ನ ರಾಂಚಿಯಲ್ಲಿ 7 ಜುಲೈ 1981ರಲ್ಲಿ ಜನಿಸಿದರು.

2) ಧೋನಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ರಾಂಚಿಯ ದೇವ ಜವಹಾರ ವಿದ್ಯಾಮಂದಿರದಲ್ಲಿ ಪಡೆದರು.

3) ಕ್ರಿಕೆಟ್‍ನತ್ತ ಒಲವು ತೋರುವ ಮುನ್ನ ಮಹಿ ತನ್ನ ಶಾಲಾ ಜೀವನದಲ್ಲಿ ಪುಟ್ಭಾಲ್‍ನ ಆಟದಲ್ಲಿ ಗೋಲ್‍ಕೀಪರ್ ಆಗಿದ್ದರು. ಅಲ್ಲದೆ ಬ್ಯಾಡ್ಮಿಂಟನ್‍ನತ್ತಲೂ ಆಸಕ್ತಿ ವಹಿಸಿದ್ದರು.

4) ಧೋನಿಯ ಬಾಲ್ಯದ ತರಬೇತಿದಾರ ಕೇಶವ ಬ್ಯಾನರ್ಜಿ ಮಹಿಯನ್ನು ಉತ್ತಮ ಕ್ರಿಕೆಟಿಗ ಹಾಗೂ ವಿಕೆಟ್‍ಕೀಪರ್ ಆಗಿ ರೂಪಿಸುವಲ್ಲಿ ಸಹಕಾರಿಯಾದರು.

5) 2001 ರಿಂದ 2003ರವರೆಗೆ ದಕ್ಷಿಣ ರೈಲ್ವೆ ವಲಯದ ಮಿಡಾಪೂರ್‍ನ ಕಾಗರ್‍ಪುರ್ ರೈಲ್ವೆ ಸ್ಟೇಷನ್‍ನಲ್ಲಿ ಟಿಟಿಇ ಕಾರ್ಯನಿರ್ವಹಿಸಿದ್ದರು.

6) ತಮ್ಮ 18ನೆ ವಯಸ್ಸಿನಲ್ಲಿ ಅಂದರೆ 199-2000ರಲ್ಲಿ ಬಿಹಾರ ತಂಡದ ಪರ ಮೊದಲ ಬಾರಿಗೆ ರಣಜಿ ಪಂದ್ಯ ಆಡುವ ಮೂಲಕ ಕ್ರಿಕೆಟ್ ಅಂಕಣಕ್ಕೆ ಹೆಜ್ಜೆ ಇಟ್ಟರು.

7) 2003ರಲ್ಲಿ ಬಾಂಗ್ಲಾ ದೇಶ ವಿರುದ್ಧ ಮೊದಲ ಏಕದಿನ ಪಂದ್ಯ ಆಡಿದ ಧೋನಿ ಡಕ್‍ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದರು.

8) ವಿಶಾಖಪಟ್ಟಣದಲ್ಲಿ ನಡೆದ ತಮ್ಮ ವೃತ್ತಿ ಜೀವನದ 4ನೆ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶತಕ ದಾಖಲೆ.

9) ದ್ರಾವಿಡ್ ನಾಯಕತ್ವದಿಂದ ಇಳಿದ ನಂತರ 2007ರಲ್ಲಿ ತಂಡದ ನಾಯಕನಾಗಿ ಆಯ್ಕೆ.

10) ಧೋನಿಯ ನಾಯಕತ್ವದಲ್ಲಿ ಟೀಂ ಇಂಡಿಯಾ ಟ್ವೆಂಟಿ- 20 (2007), ಐಸಿಸಿ ವಿಶ್ವಕಪ್ (2011) ಹಾಗೂ ಚಾಂಪಿಯನ್ಸ್ ಟ್ರೋಫಿ (2013) ಗೆದ್ದಿದೆ.

11) 2014ರಲ್ಲಿ ಆಸ್ಟ್ರೇಲಿಯಾದ ವಿರುದ್ಧದ ಮೂರನೆ ಟೆಸ್ಟ್‍ನ ನಂತರ ಟೆಸ್ಟ್ ಜೀವನಕ್ಕೆ ನಿವೃತ್ತಿ.

12) ಜುಲೈ 4, 2010ರಂದು ಸಾಕ್ಷಿಯೊಂದಿಗೆ ಧೋನಿ ವಿವಾಹ.

13) 2015ರಲ್ಲಿ ತಂದೆಯಾದ ಸಂಭ್ರಮ. ಜೀವಾ ಎಂಬುದು ಮಹಿ ಪುತ್ರಿಯ ಹೆಸರು.

14) ಟೆಸ್ಟ್‍ನಲ್ಲಿ ಅತಿ ಹೆಚ್ಚು ಪಂದ್ಯ (27 ಪಂದ್ಯ) ಗೆದ್ದ ದಾಖಲೆ. ಗಂಗೂಲಿ 21 ಪಂದ್ಯಗಳಲ್ಲಿ ಜಯಿಸಿದ್ದಾರೆ.

15) ಶ್ರೀಲಂಕಾ ವಿರುದ್ಧ 183* ಧೋನಿ ಗಳಿಸಿರುವ ಸರ್ವಶ್ರೇಷ್ಠ ರನ್.

16) 2011ರಲ್ಲಿ ಭಾರತ ಸೈನ್ಯದಿಂದ ಆರ್ನರಿ ರ್ಯಾಂಕ್ ಪ್ರದಾನ.

17) ಕಪಿಲ್‍ದೇವ್ ನಂತರ ಇಂತಹ ಆರ್ನರಿ ರ್ಯಾಂಕ್ ಪಡೆದ ಕ್ರಿಕೆಟಿಗ ಎಂಬ ಖ್ಯಾತಿ.

18) ಏಕದಿನದ ಇತಿಹಾಸದಲ್ಲಿ 7ನೆ ಕ್ರಮಾಂಕದಲ್ಲಿ ಬಂದು ಶತಕ ಗಳಿಸಿದ ಏಕಮೇವ ಭಾರತೀಯ ನಾಯಕ. ಪಾಕಿಸ್ತಾನದ ವಿರುದ್ಧ 2012ರಲ್ಲಿ ಮಹಿ ಈ ದಾಖಲೆ ನಿರ್ಮಿಸಿದ್ದರು.

19) ಧೋನಿ ಬೌಲಿಂಗ್‍ನಲ್ಲಿ ವೆಸ್ಟ್‍ಇಂಡೀಸ್‍ನ ಟ್ರಾವಿಸ್ ಡಾಲ್ವಿನ್‍ರ ವಿಕೆಟ್ ಪಡೆಯುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ವಿಕೆಟ್ ಪಡೆದ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.

20) ಧೋನಿಯ ಜೀವನಾಧಾರಿತ ಬಾಲಿವುಡ್ ಚಿತ್ರ `ಎಂಎಸ್ ಧೋನಿ ದಿ ಆನ್‍ಲೋಲ್ಡ್ ಸ್ಟೋರಿ’ 2016ರಲ್ಲಿ ಬಿಡುಗಡೆಗೊಂಡಿದೆ.

21) 2010ರಲ್ಲಿ ಬಿಡುಗಡೆಗೊಂಡ ಧೋ ಹುಕ್ ಯಾ ಕ್ರೊಕ್ ಎಂಬ ಚಿತ್ರದಲ್ಲಿ ನಟಿಸಿದ್ದಾರೆ.

22) 2017 ಜನವರಿಯಲ್ಲಿ ಧೋನಿ ಏಕದಿನ ಪಂದ್ಯಗಳ ನಾಯಕತ್ವಕ್ಕೂ ರಾಜೀನಾಮೆ.

23) ಧೋನಿಯ ನಾಯಕತ್ವದಲ್ಲಿ ಭಾರತವು 163 ಏಕದಿನ ಪಂದ್ಯಗಳನ್ನು ಜಯಿಸಿದೆ.

24) ಟೆಸ್ಟ್‍ನಲ್ಲಿ ಅತಿ ಹೆಚ್ಚು ರನ್‍ಗಳಿಸಿದ ಮೂರನೇ ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿದ್ದಾರೆ. ಆ್ಯಡಂ ಗ್ರಿಲ್‍ಕ್ರಿಸ್ಟ್ , ಮಾರ್ಕ್ ಬೋಚರ್, ಮಹಿಗಿಂತ ಹೆಚ್ಚು ರನ್ ಗಳಿಸಿದ ವಿಕೆಟ್ ಕೀಪರ್ ಆಗಿದ್ದಾರೆ.

25) ಆಸ್ಟ್ರೇಲಿಯಾ ವಿರುದ್ಧ ಗಳಿಸಿದ 224 ರನ್ ವಿಕೆಟ್‍ಕೀಪರ್ ಒಬ್ಬ ಗಳಿಸಿದ 3ನೆ ಅತ್ಯಧಿಕ ಸ್ಕೋರ್.

26)ಭಾರತ ತಂಡದ ಅತಿ ಹೆಚ್ಚು ಎದುರಾಳಿ ಆಟಗಾರರನ್ನು ಔಟ್ ಮಾಡಿದ ಕೀರ್ತಿ ಧೋನಿಗೆ ಲಭಿಸುತ್ತದೆ.

27) ಏಕದಿನ ಇತಿಹಾಸದಲ್ಲಿ 300 ಪಂದ್ಯಗಳನ್ನು ಆಡಲು ಧೋನಿ ಇನ್ನೂ 4 ಪಂದ್ಯಗಳನ್ನಾಡಬೇಕಾಗಿದೆ.

28) ಅತಿ ಹೆಚ್ಚು ಸಿಕ್ಸರ್ (204)ಸಿಡಿಸಿದ ನಾಯಕ.

29) ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ (322) ಸಿಡಿಸಿದ 5ನೆ ಆಟಗಾರ. ಪಾಕ್‍ನ ಶಹೀದ್ ಆಫ್ರಿದಿ 476 ಸಿಕ್ಸರ್‍ಗಳನ್ನು ಸಿಡಿಸಿದ್ದಾರೆ.

30) ಐಪಿಎಲ್‍ನ ಮೊದಲ ಆವೃತ್ತಿಯಲ್ಲಿ 1.5 ಮಿಲಿಯನ್ ಡಾಲರ್‍ಗೆ ಧೋನಿ ಬಿಕರಿ.

31) ಐಪಿಎಲ್‍ನಲ್ಲಿ ತಮ್ಮ ನಾಯಕತ್ವದಡಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ (2010, 2011) ಹಾಗೂ ಚಾಂಪಿಯನ್ಸ್ ಲೀಗ್ (2010, 2014)ರಲ್ಲಿ ವಿಜೇತ ತಂಡವಾಗಿ ಹೊರಹೊಮ್ಮಿದೆ.

32) ಮೋಟಾರ್‍ಬೈಕ್‍ಗಳ ಕ್ರೇಜ್ ಇರುವ ಧೋನಿಯ ಬಳಿ 20 ಕ್ಕೂ ಹೆಚ್ಚು ದುಬಾರಿ ಬೆಲೆಯ ಬೈಕ್‍ಗಳಿವೆ.

33) ಮಹಿ ಪ್ರಾಣಿ ಪ್ರಿಯನಾಗಿದ್ದು ಜರ್ರಾ ಮತ್ತು ಶ್ಯಾಮ್‍ಗೆ ತಮ್ಮ ಜೀವನದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದ್ದಾರೆ.

34) ಎಲಿಕಾಪ್ಟರ್ ಶಾಟ್‍ಗಳಿಂದ ಅತಿ ಹೆಚ್ಚು ಪ್ರಚಾರಗೊಂಡಿರುವ ಮಹಿ ಆ ಕಲೆಯನ್ನು ಕಲಿತಿದ್ದು ತಮ್ಮ ಸ್ನೇಹಿತ ಸಂತೋಷ್‍ಲಾಲ್ ಎಂಬುವವರಿಂದ.

35) ರಾಂಚಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದಿ ದೋರಿ ಮಂದಿರ್‍ಗೆ ಭೇಟಿ ನೀಡುವುದೆಂದರೆ ಧೋನಿಗೆ ಎಲ್ಲಿಲ್ಲದ ಪ್ರೀತಿ.

36) ಸೂಪರ್ ಸ್ಪೋಟ್ಸ್ ವಿಶ್ವ ಚಾಂಪಿಯನ್ಸ್ ಲೀಗ್‍ನಲ್ಲಿ ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ್‍ರ ಸಹಭಾಗಿತ್ವದೊಂದಿಗೆ ಮಹಿ ರೈಸಿಂಗ್ ತಂಡವನ್ನು ಖರೀದಿಸಿದ್ದಾರೆ.
ಕ್ರಿಕೆಟ್ ಕೇವಲ ಯುವಕರ ಆಟವೆಂದೇ ಹೇಳಲಾಗುತ್ತಿದೆ ಆದರೂ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ವೆಸ್ಟ್‍ಇಂಡೀಸ್ ವಿರುದ್ಧದ ಸರಣಿಯಲ್ಲಿ ತೋರಿಸಿರುವ ಆಟದ ಪ್ರದರ್ಶನವು ಯುವ ಆಟಗಾರರಿಗೆ ಪೈಪೋಟಿ  ನೀಡುವಂತಿತ್ತು.  ಇಂತಹ ಕ್ಯಾಪ್ಟನ್ ಕೂಲ್ ಕ್ರಿಕೆಟ್ ಇತಿಹಾಸದಲ್ಲಿ ಮತ್ತಷ್ಟು ದಾಖಲೆಗಳನ್ನು ನಿರ್ಮಿಸುವಂತಾಗಲಿ ಎಂದು ಕ್ರಿಕೆಟ್ ಆಟಗಾರರು, ದಿಗ್ಗಜರು ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಶುಭ ಕೋರಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin