ಧಾರ್ಮಿಕ ಕೇಂದ್ರಗಳಿಗೆ ಅಲ್ಪಸಂಖ್ಯಾತ ನೇಮಕ, ವಜಾಗೊಳಿಸಲು ರಾಜ್ಯಪಾಲರಿಗೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

Vajubhai-wala

ಬೆಂಗಳೂರು,ಜು.7-ಹಿಂದು ಧಾರ್ಮಿಕ ಕೇಂದ್ರಗಳಿಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರನ್ನು ನೇಮಕ ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಇವರನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ತನ್ನ ಅಧೀನದಲ್ಲಿರುವ ಧಾರ್ಮಿಕ ದತ್ತಿ ಕೇಂದ್ರಗಳಿಗೆ ಏಳು ಮಂದಿ ಕ್ರಿಶ್ಚಿಯನ್ ಹಾಗೂ ಇಷ್ಟೇ ಸಂಖ್ಯೆಯ ಇಸ್ಲಾಂ ಧರ್ಮಕ್ಕೆ ಸೇರಿದ ನೌಕರರನ್ನು ಹಿಂದೂ ದೇವಾಲಯಗಳಿಗೆ ನೇಮಕ ಮಾಡಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿಎಚ್‍ಪಿ, ಭಜರಂಗದಳ ಸೇರಿದಂತೆ ಕೆಲವು ಸಂಘಟನೆಗಳ ಮುಖಂಡರು ರಾಜ್ಯಪಾಲ ವಿ.ಆರ್.ಪಾಲ ಅವರಿಗೆ ದೂರು ನೀಡಿ ನೌಕರರನ್ನು ವಜಾಗೊಳಿಸಬೇಕು, ಇಲ್ಲವೇ ಸರ್ಕಾರದ ಆದೇಶವನ್ನು ಹಿಂಪಡೆಯುವಂತೆ ನಿರ್ದೇಶನ ನೀಡಬೇಕೆಂದು ದೂರು ನೀಡಿದ್ದಾರೆ.

1997ರ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಮುಜರಾಯಿ ಕಾಯ್ದೆ ಪ್ರಕಾರ ಯಾವುದೇ ಧರ್ಮದ ಧಾರ್ಮಿಕ ಕೇಂದ್ರಗಳಿಗೆ ಅನ್ಯಧರ್ಮೀಯರನ್ನು ನೇಮಕ ಮಾಡುವಂತಿಲ್ಲ ಎಂಬ ನಿಯಮವಿದೆ. ಸರ್ಕಾರ ನಿಯಮವನ್ನು ಉಲ್ಲಂಘಿಸಿದ್ದು , ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆಪಾದಿಸಿದ್ದಾರೆ.  ವಿಹೆಚ್‍ಪಿ ಮುಖಂಡ ಗಿರೀಶ್ ಭಾರದ್ವಾಜ ಎಂಬುವರು ರಾಜ್ಯಪಾಲರಿಗೆ ದೂರು ನೀಡಿದ್ದು , ಮುಜರಾಯಿ ಇಲಾಖೆ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಅನ್ಯಧರ್ಮೀಯ ನೌಕರರನ್ನು ನೇಮಕ ಮಾಡುವ ಮೂಲಕ ನಮ್ಮ ಭಾವನೆಗಳಿಗೆ ಧಕ್ಕೆ ತಂದಿದೆ. ಹೀಗಾಗಿ ರಾಜ್ಯಪಾಲರಿಗೆ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.

ಆದರೆ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿರುವ ಮುಜರಾಯಿ ಇಲಾಖೆ ಆಯುಕ್ತರಾದ ಎಂ.ನಳೀನ ಅವರು ನಾವು 1997ರ ಹಿಂದೂ ಧಾರ್ಮಿಕ ಸಂಸ್ಥೆ ಮುಜರಾಯಿ ಇಲಾಖೆ ಕಾಯ್ದೆ ಪ್ರಕಾರವೇ ನೌಕರರನ್ನು ನೇಮಕ ಮಾಡಿದ್ದೇವೆ. ಇಲ್ಲಿ ನಿಯಮ ಉಲ್ಲಂಘನೆಯ ಪ್ರಶ್ನೆಯೇ ಬರುವುದಿಲ್ಲ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಹಿಂದೆಯೂ ಬೇರೆ ಬೇರೆ ಧಾರ್ಮಿಕ ಕೇಂದ್ರಗಳಿಗೆ ಅನ್ಯ ಧರ್ಮೀಯರನ್ನು ನೇಮಕ ಮಾಡಲಾಗಿತ್ತು. ಅಂದು ಬಾರದ ವಿವಾದ ಇಂದು ಏಕೆ ಉಂಟಾಗಿದೆ ಎಂದು ನಳಿನಾ ಪ್ರಶ್ನಿಸಿದ್ದಾರೆ. ಸರ್ಕಾರದ ಈ ವಾದವನ್ನು ಒಪ್ಪದ ಬಲಪಂಥೀಯರು ರಾಜ್ಯಪಾಲರ ಮೂಲಕ ಒತ್ತಡ ಹಾಕಿ ನೌಕರರನ್ನು ವಜಾಗೊಳಿಸಲು ಪಟ್ಟು ಹಿಡಿದಿದ್ದಾರೆ. ಚೆಂಡು ಇದೀಗ ರಾಜಭವನದಲ್ಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin