ನಾನು ರಾಜಕೀಯಕ್ಕೆ ಬರಲ್ಲ : ಶಿವರಾಜ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

Shivarajkumar--01

ಹಾಸನ, ಜು.7- ನನಗೆ ರಾಜಕೀಯಕ್ಕೆ ಬರುವ ಉದ್ದೇಶವೂ ಇಲ್ಲ. ನಾನು ಬರುವುದೂ ಇಲ್ಲ ಎಂದು ಹ್ಯಾಟ್ರಿಕ್ ಹಿರೋ ಡಾ.ಶಿವರಾಜ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ. ಕಲ್ಯಾಣ್ ಜ್ಯೂವೆಲರ್ಸ್‍ನ ರಾಯಬಾರಿಯಾಗಿರುವ ಶಿವಣ್ಣ ಇಂದು ನಗರದಲ್ಲಿ ಶೋರೂಂ ಉದ್ಘಾಟಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ರಾಜಕೀಯಕ್ಕೆ ಬರುವುದಾಗಿ ಯಾರೋ ಸುದ್ದಿ ಹಬ್ಬಿಸಿದ್ದಾರೆ. ಇದೆಲ್ಲಾ ಅಪಟ್ಟ ಸುಳ್ಳು. ಒಂದು ವೇಳೆ ಆ ರೀತಿ ಇದ್ದರೆ ಮೊದಲು ಮಾಧ್ಯಮದವರಿಗೆ ಹೇಳುತ್ತಿದ್ದೆ. ಆದರೆ, ಅಂತಹ ಯಾವುದೇ ವಿಷಯ ಇಲ್ಲ. ರಾಜಕೀಯಕ್ಕೆ ಬರುವ ಆಸೆ, ಆಸಕ್ತಿ ನನಗಿಲ್ಲ ಎಂದು ಪುನರುಚ್ಚರಿಸಿದರು.

ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ಅವರು ನಿಮ್ಮ ಮನೆಗೆ ಭೇಟಿ ನೀಡಿದ್ದರಲ್ಲ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ತಾಯಿ ನಿಧನಹೊಂದಿದ್ದರ ಹಿನ್ನೆಲೆಯಲ್ಲಿ ನಮಗೆ ಸಾಂತ್ವನ ಹೇಳಲು ಅವರು ಬಂದಿದ್ದರು. ಅಂತಹ ದೊಡ್ಡವರು ನಮ್ಮ ಮನೆಗೆ ಬಂದದ್ದು ಖುಷಿಯಾಗಿದೆ. ರಾಹುಲ್‍ಗಾಂಧಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ನಮ್ಮ ಮನೆಗೆ ಬಂದ ಮಾತ್ರಕ್ಕೆ ನಾನು ರಾಜಕೀಯಕ್ಕೆ ಬರುತ್ತೇನೆ ಎಂದು ಹೇಳುವುದು ಸರಿಯಲ್ಲ ಸ್ಪಷ್ಟಪಡಿಸಿದರು. ನಾನು ಕಲ್ಯಾಣ್ ಜ್ಯುವೆಲರ್ಸ್‍ನ ರಾಯಬಾರಿಯಾಗಿದ್ದೇನೆ. ಇಂದು ಹಾಸನ, ಬಳ್ಳಾರಿ, ಉಡುಪಿ, ಶಿವಮೊಗ್ಗ ಮತ್ತು ದಾವಣೆಗೆರೆಯಲ್ಲಿ ಶೋರೂಂಗಳು ಪ್ರಾರಂಭವಾಗುತ್ತಿವೆ. ಹಾಸನದಿಂದಲೇ ಮೊದಲು ಶೋರೂಂಗೆ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin