ಅಪಘಾತ ಪ್ರಕರಣದಲ್ಲಿ 26 ವರ್ಷಗಳ ಬಳಿಕ ಭಾರತದ ಮೂಲದ ವ್ಯಕ್ತಿಗೆ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Jailed-01

ನ್ಯೂಯಾರ್ಕ್,ಜು.8-ಕಾರು ಅಪಘಾತದಲ್ಲಿ ಮಹಿಳೆಗೆ ಗುದ್ದಿ ಪರಾರಿಯಾಗಿದ್ದ ಪ್ರಕರಣ ಸಂಬಂಧ ಭಾರತ ಮೂಲದ ವ್ಯಕ್ತಿಯೊಬ್ಬರಿಗೆ ಸತತ 26 ವರ್ಷಗಳ ಬಳಿಕ ಪೊಲೀಸರು ಅರೆಸ್ಟ್ ಮಾಡಿದೆ.   ಜಯಪಾಲ್ ಮಹಾರಾಜ್ ಎಂಬಾತನನ್ನು ನಿನ್ನೆ ಅಮೆರಿಕ ಪೊಲೀಸರು ಬಂಧಿಸಿ ಮಾಡಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಎಂದು ಟ್ವಿನ್ಸ್ ಜಿಲ್ಲೆಯ ಅರ್ಟಾನಿ ರಿರ್ಚರಡ್ ಬ್ರಾನ್ ತಿಳಿಸಿದ್ದಾರೆ.

ಏನಿದು ಪ್ರಕರಣ:

1990 ಡಿಸೆಂಬರ್‍ನಲ್ಲಿ ಜಯಪಾಲ್ ಮಹಾರಾಜ್ ರೆಡ್‍ಲೈಟ್‍ನಲ್ಲಿರುವಾಗ ಕಾರು ಚಾಲನೆ ಮಾಡಿ ಮಹಿಳೆಯ ಕಾಲಿಗೆ ಗುದ್ದಿದರು. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು.   ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ವಿಚಾರಣೆ ನಡೆಸಿದ ಪೊಲೀಸರು ಸತತ 26 ವರ್ಷಗಳ ಬಳಿಕ ಜಯಪಾಲ್‍ರನ್ನು ಬಂಧಿಸಿ ನ್ಯಾಯಾಲಯ್ಕೆ ಹಾಜರುಪಡಿಸಿದ್ದರು. ಈಗ ಕೋರ್ಟ್ 26 ವರ್ಷಗಳ ಬಳಿಕ ಸಿಕ್ಕಿಬಿದ್ದ ಮಹಾರಾಜ್‍ಗೆ ಶಿಕ್ಷೆ ವಿಧಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin