ಐಎಸ್ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ 26 ಯೋಧರ ಹತ್ಯೆ, 40 ಉಗ್ರರ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ISIS--01

ಕೈರೋ, ಜು.8- ಈಜಿಪ್ಟ್ ನ ಸಿನೈ ಪರ್ಯಾಯ ದ್ವೀಪದಲ್ಲಿನ ಚೆಕ್ ಪಾಯಿಂಟ್‍ಗಳ ಮೇಲೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ನಿನ್ನೆ ನಡೆಸಿದ ಭೀಕರ ದಾಳಿಯಲ್ಲಿ 26 ಯೋಧರು ಹತರಾಗಿದ್ದು, ಅನೇಕರ ಗಾಯಗೊಂಡಿದ್ದಾರೆ. ಇದೇ ವೇಳೆ ಉತ್ತರ ಸಿನೈನಲ್ಲಿ ಭಯೋತ್ಪಾದಕರ ವಿರುದ್ಧ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ 40 ಉಗರು ಬಲಿಯಾಗಿದ್ದಾರೆ.
ಸಿನೈ ದ್ವೀಪದಲ್ಲಿ ಐಎಸ್ ಭಯೋತ್ಪಾದಕರ ಚಟುವಟಿಕೆ ತೀವ್ರಗೊಂಡಿರುವಾಗಲೇ ಈ ಹತ್ಯಾಕಾಂಡ ನಡೆದಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಗ್ರರನ್ನು ನಿಗ್ರಹಿಸಲು ಸೇನೆ ನಡೆಸಿದ ಬಿರುಸಿನ ಕಾರ್ಯಾಚರಣೆಯಲ್ಲಿ 40ಕ್ಕೂ ಹೆಚ್ಚು ಐಎಸ್ ಬಂಡುಕೋರರು ಹತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin