ಡಾರ್ಜಿಲಿಂಗ್‍ನಲ್ಲಿ ಹಿಂಸಾಚಾರ ಉಲ್ಬಣ, ಗೋಲಿಬಾರ್‍ನಲ್ಲಿ ಅನೇಕರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Darjeeling-Violence

ಡಾರ್ಜಿಲಿಂಗ್, ಜು.8-ಪ್ರತೇಕ ಗೂರ್ಖಾಲ್ಯಾಂಡ್ ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ 24ನೇ ದಿನಕ್ಕೆ ಕಾಲಿಟ್ಟಿರುವಾಗಲೇ, ಬಂದೂಕದ ಗುಂಡುಗಳ ಹೊಕ್ಕಿದ್ದ ಯುವಕನ ಮೃತದೇಹವೊಂದು ಇಂದು ಬೆಳಗ್ಗೆ ಪತ್ತೆಯಾಗಿ ಹಿಂಸಾಚಾರ ಉಲ್ಬಣಗೊಂಡಿದೆ. ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ ಹಿಂಸಾಚಾರದಲ್ಲಿ ತೊಡಗಿದ್ದ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರ್‍ನಲ್ಲಿ ಅನೇಕರು ಗಾಯಗೊಂಡಿದ್ದಾರೆ.  ಗಿರಿಧಾಮದಿಂದ 15 ಕಿ.ಮೀ. ದೂರದಲ್ಲಿರುವ ಸೋನಾದಲ್ಲಿ ಯುವಕನ ಶವವೊಂದು ಪತ್ತೆಯಾಯಿತು. ಮೃತದೇಹದಲ್ಲಿ ಗುಂಡುಗಳು ಹೊಕ್ಕಿದ್ದವು. ಇದರಿಂದ ಕುಪಿತರಾದ ಸ್ಥಳೀಯರು ಶವದೊಂದಿಗೆ ಸೋನಾದ ಪೊಲೀಸ್ ಠಾಣೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು.

ಈ ಸಂದರ್ಭದಲ್ಲಿ ಉದ್ರಿಕ್ತರು ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮತ್ತು ಆಶ್ರು ವಾಯು ಪ್ರಯೋಗಿಸಿದರು. ನಂತರ ರಬ್ಬರ್ ಬುಲೆಟ್‍ಗಳನ್ನು ಬಳಸಿ ಗುಂಡು ಹಾರಿಸಿದರು. ಘರ್ಷಣೆ ಮತ್ತು ಗೋಲಿಬಾರ್‍ನಲ್ಲಿ ಅನೇಕರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರ ಆಕ್ರೋಶಕ್ಕೆ ಅನೇಕ ವಾಹನಗಳು ಬೆಂಕಿಗಾಹುತಿಯಾಗಿವೆ. ಡಾರ್ಜಿಲಿಂಗ್‍ನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ತಲೆದೋರಿದ್ದು, ಹೆಚ್ಚುವರಿ ಪೊಲೀಸ್ ಪಡೆಯೊಂದಿಗೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin