ಪೂಂಚ್ ಜಿಲ್ಲೆಯ ಗಡಿಯಲ್ಲಿ ಮತ್ತೆ ಪಾಕಿಗಳ ಪುಂಡಾಟ : ಯೋಧ, ಪತ್ನಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Firing--01

ಶ್ರೀನಗರ, ಜು.8-ಅತ್ತ ಈಶಾನ್ಯ ರಾಜ್ಯ ಸಿಕ್ಕಿಂನಲ್ಲಿ ಗಡಿ ಬಿಕ್ಕಟ್ಟು 23ನೇ ದಿನಕ್ಕೆ ಕಾಲಿಟ್ಟಿದ್ದರೆ. ಇತ್ತ ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ಸೈನಿಕರು ಮತ್ತು ಕ್ಯಾತೆ ತೆಗೆದಿದ್ದಾರೆ. ಪೂಂಚ್ ಜಿಲ್ಲೆಯ ಗಡಿ ಪ್ರದೇಶದಲ್ಲಿ ಇಂದು ಮುಂಜಾನೆ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಯೋಧ ಮತ್ತು ಆತನ ಪತ್ನಿ ಬಲಿಯಾಗಿದ್ದು, ಅನೇಕರು ಗಾಯಗೊಂಡಿದ್ದಾರೆ.   ಜ ಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್‍ನ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಖಾರಿ ಕರಮಾರದಲ್ಲಿ ಬೆಳಗ್ಗೆ 6.30ರಲ್ಲಿ ಪಾಕಿಸ್ತಾನ ಯೋಧರು ಮತ್ತೆ ಪುಂಡಾಟ ನಡೆಸಿದರು.

ಮತ್ತೆ ಯುದ್ಧ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದರು. ಈ ಕುಕೃತ್ಯದಲ್ಲಿ ಮಹಮದ್ ಶೌಕತ್ ಎಂಬ ಯೋಧ ಮತ್ತು ಆತನ ಪತ್ನಿ ಶಾಫಿಯಾ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ರಜೆ ಮೇಲೆ ಮನೆಗೆ ಬಂದಿದ್ದ ಯೋಧ ಶೌಕತ್ ತನ್ನ ಪತ್ನಿಯೊಂದಿಗೆ ಬಲಿಯಾಗಿರುವುದು ಭಾರತೀಯ ಯೋಧರನ್ನು ಕೆರಳಿಸಿದೆ.  ಪಾಕ್ ಪುಂಡಾಟಕ್ಕೆ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದು, ಆ ಪ್ರದೇಶದಲ್ಲಿ ಕೆಲಕಾಲ ಗುಂಡಿನ ಚಕಮಕಿ ನಡೆದು ಪ್ರಕ್ಷುಬ್ಧ ವಾತಾವರಣ ನೆಲೆಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin