ವೀರಭದ್ರೇಶ್ವರಸ್ವಾಮಿ ದೇವಾಲಯ ಹುಂಡಿ ಹಣ ದೋಚಿದ ಕಳ್ಳರು

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ, ಜು.8- ವೀರಭದ್ರೇಶ್ವರ ಸ್ವಾಮಿ ದೇವಾಲಯದ ಬಾಗಿಲು ಮೀಟಿ ಒಳನಗ್ಗಿದ ಚೋರರು ಮೂರು ಹುಂಡಿಯಲ್ಲಿದ್ದ ಹಣವನ್ನು ಕದ್ದೊಯ್ದಿರುವ ಘಟನೆ ವೇಮಗಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಕೋಲಾರ ತಾಲ್ಲೂಕಿನ ರಾಜಕಲ್ಲಹಳ್ಳಿಯಲ್ಲಿ ಪ್ರಸಿದ್ಧ ವೀರಭದ್ರೇಶ್ವರಸ್ವಾಮಿ ದೇವಾಲಯವಿದ್ದು, ರಾತ್ರಿ ಕಳ್ಳರು ದೇವಾಲಯದ ಬಾಗಿಲು ಮೀಟಿ ಒಳನುಗ್ಗಿ ಮೂರು ಹುಂಡಿಯನ್ನು ಒಡೆದು ಅದರಲ್ಲಿದ್ದ ಲಕ್ಷಾಂತರ ಹಣವನ್ನು ಕದೊಯ್ದಿದ್ದಾರೆ. ಇಂದು ಬೆಳಗ್ಗೆ ಅರ್ಚಕರು ದೇವಾಲಯಕ್ಕೆ ಬಂದಾಗಲೇ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin