ಸಚಿವ ಮಹದೇವಪ್ಪ ಆಗಮನಕ್ಕಾಗಿ ಕಾದು ಕಾದು ಕೆಂಪಾದ ಸಿಎಂ ಸಿದ್ದರಾಮಯ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

Mahadevappa--Cm-Waiting----

ಬೆಂಗಳೂರು, ಜು.8- ಅಂಬೇಡ್ಕರ್ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಪತ್ರಿಕಾಗೋಷ್ಠಿ ನಡೆಸಲು ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಎಚ್.ಸಿ.ಮಹದೇವಪ್ಪ ಅವರಿಗಾಗಿ ಕಾದು ಕುಳಿತ ಘಟನೆ ನಡೆಯಿತು.  ಇದೇ ಸಂದರ್ಭದಲ್ಲಿ ಮಹದೇವಪ್ಪ ಅವರನ್ನು ಪತ್ರಿಕಾಗೋಷ್ಠಿಗೆ ಆಹ್ವಾನ ನೀಡದೇ ಇರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಆಂಜನೇಯ ಅವರನ್ನು ತರಾಟೆಗೆ ತೆಗೆದುಕೊಂಡರು.  ಇಂದು ಬೆಳೆಗ್ಗೆ 10 ಗಂಟೆಗೆ ವಿಧಾನಸಭೆಯ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಸಮಯ ನಿಗದಿಯಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಯಕ್ಕೆ ಸರಿಯಾಗಿ ಆಗಮಿಸಿದರು.

ಸಚಿವರಾದ ಟಿ.ಬಿ.ಜಯಚಂದ್ರ, ಎಚ್.ಆಂಜನೇಯ, ಪ್ರಿಯಾಂಕ್ ಖರ್ಗೆ, ಕೃಷ್ಣಬೈರೇಗೌಡ, ರಾಜ್ಯಸಭಾ ಸದಸ್ಯ ರಾಜೀವ್‍ಗೌಡ ಮತ್ತಿತರರು ಆಗಮಿಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಹಾಜರಿರಲಿಲ್ಲ.  ಸಮ್ಮೇಳನದ ಸಭಾಂಗಣದ ಒಳಗೆ ಬಂದ ಸಿಎಂ, ಮಹದೇವಪ್ಪ ಎಲ್ಲಿ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರ ನೀಡಿದ ಆಂಜನೇಯ, ಅವರಿಗೆ ಉಷಾರಿಲ್ಲ. ಅದಕ್ಕೆ ಬಂದಿಲ್ಲ ಎಂದು ಹೇಳಿದರು.

ಇದರಿಂದ ಕೆಂಡಾಮಂಡಲರಾದ ಸಿಎಂ, ಯಾರ್ರಿ ಹೇಳಿದ್ದು, ಉಷಾರಿಲ್ಲ ಅಂತ, ಅವರು ನಿನ್ನೆ ಟೂರ್ ಹೋಗಿದ್ರು, ಉಷಾರಾಗೇ ಇದ್ದಾರೆ. ಅವರನ್ನು ಕರೆದಿದ್ದೀರೋ ಇಲ್ಲವೋ, ಆಂಜನೇಯ ಫೋನ್ ಮಾಡಿ ಕರಿಲಿಲ್ವೇನ್ರೀ ? ಸರಿಯಾಗಿ ಮಾಹಿತಿ ಕೊಟಿಲ್ವಾ ಆಂಜನೇಯ ಎಂದು ಗರಂ ಆದ್ರು.  ತಕ್ಷಣ ಮಧ್ಯ ಪ್ರವೇಶಿಸಿದ ಸಚಿವರಾದ ಟಿ.ಬಿ.ಜಯಚಂದ್ರ ಮತ್ತು ಪ್ರಿಯಾಂಕ್ ಖರ್ಗೆ, ಮಹದೇವಪ್ಪ ಅವರು ಬಂದಿದ್ದಾರೆ. ಕೆಳಗೆ ಇದ್ದಾರೆ, ಇನ್ನು ಸ್ವಲ್ಪ ಹೊತ್ತು ಬರ್ತಾರೆ ಎಂದು ಸಮಾಧಾನ ಪಡಿಸಿದರು.  ಸರಿ ಎಂದು ಆಸಿನರಾದ ಸಿದ್ದರಾಮಯ್ಯ ಅವರು, ಮಹದೇವಪ್ಪ ಅವರಿಗೆ ಕಾದು ಕುಳಿತರು. ಮಹದೇವಪ್ಪ ಅವರು ಬರುತ್ತಿದ್ದಂತೆ ಬಾರಯ್ಯಾ ಕೂತ್ಕೋ ಎಂದು ಸಲಿಗೆಯಿಂದ ಮಾತನಾಡಿಸಿದರು. ಜತೆಯಲ್ಲೇ ಕೂತ ಪತ್ರಿಕಾಗೋಷ್ಠಿ ಆರಂಭಿಸಿದರು. ತಪ್ಪು ಮಾಹಿತಿ ಕೊಟ್ಟ ಆಂಜನೇಯ ಅವರಿಗೆ ಸ್ವಲ್ಪ ಹಿರಿಸುಮುರಿಸು ಅನುಭವಿಸುವಂತಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS 

Facebook Comments

Sri Raghav

Admin