ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯಲು ನೆರವು ನೀಡುವಂತೆ ಸುಷ್ಮಾಗೆ ಪಾಕ್ ಮಹಿಳೆ ಮೊರೆ

ಈ ಸುದ್ದಿಯನ್ನು ಶೇರ್ ಮಾಡಿ

Sushma-swaraj--01

ಇಸ್ಲಾಮಾಬಾದ್, ಜು.9-ಕ್ಯಾನ್ಸರ್‍ನಿಂದ ಬಳಲುತ್ತಿರುವ ಪಾಕಿಸ್ತಾನದ ಮಹಿಳೆಯೊಬ್ಬರು ಭಾರತಕ್ಕೆ ಬಂದು ಚಿಕಿತ್ಸೆ ಪಡೆಯಲು ಮೆಡಿಕಲ್ ವೀಸಾದ ನಿರೀಕ್ಷೆಯಲ್ಲಿದ್ದು, ಸಹಾಯಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾಸ್ವರಾಜ್ ಮೊರೆ ಹೋಗಿದ್ದಾರೆ. ಪಾಕಿಸ್ತಾನದ 25 ವರ್ಷದ ಫೈಜಾ ತನ್ವೀರ್ ಎಂಬ ಮಹಿಳೆ ವೈದ್ಯಕೀಯ ವೀಸಾಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಅದರ ಅರ್ಜಿಯನ್ನು ಇಸ್ಮಾಮಾಬಾದ್‍ನ ಭಾರತೀಯ ರಾಯಭಾರಿ ಕಚೇರಿ ತಿರಸ್ಕರಿಸಿದೆ.

ಉಭಯ ದೇಶಗಳ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮಗಳು ಸಲ್ಲಿಸಿರುವ ಅರ್ಜಿ ತಿರಸ್ಕøತವಾಗಿವೆ ಎಂದು ಫೈಜಾ ತಾಯಿ ನೊಂದು ನುಡಿದಿದ್ದಾರೆ. ಈಗ ವೀಸಾ ಪಡೆಯಲು ಸುಷ್ಮಾಸ್ವರಾಜ್ ಮೊರೆ ಹೋಗಿರುವ ಫೈಜಾ ಸಾಮಾಜಿಕ ಜಾಲತಾಣಗಳ ಮೂಲಕ ನೆರವು ಕೋರಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin