ಮಾಮೂಲಿ ಕೇಳಿದ್ದ ಪೊಲೀಸ್ ಸಬ್‍ ಇನ್’ಸ್ಪೆಕ್ಟರ್ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

PSI--Police--01

ತುಮಕೂರು, ಜು.9-ಲಂಚ ಬೇಡಿಕೆಯ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್ ಅವರು ತಿಪಟೂರು ಗ್ರಾಮಾಂತರ ಪೊಲೀಸ್ ಇನ್’ಸ್ಪೆಕ್ಟರ್ ಶ್ರೀಕಾಂತ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ತಿಪಟೂರು ಗ್ರಾಮಾಂತರ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಶ್ರೀಕಾಂತ್ ಅಮಾಯಕನ ಮೇಲೆ ಗೂಂಡಾವರ್ತನೆ ತೋರಿಸಿದ್ದಾರೆ.  ಬಿದರೆಗುಡಿ ಗ್ರಾಮದಲ್ಲಿ ಹಾದುಹೋಗುವ ತುಮಕೂರು-ಶಿವಮೊಗ್ಗ ಹೆದ್ದಾರಿ ಪಕ್ಕದಲ್ಲಿ ಕುಮಾರ್ ಎಂಬುವರು ಕಳೆದ 15 ವರ್ಷದಿಂದ ರಾತ್ರಿ ವೇಳೆ ಟೀ ಅಂಗಡಿ ನಡೆಸುತ್ತಿದ್ದಾರೆ.

ಕಳೆದ ಜೂ.3 ರಂದು ಟೀ ಅಂಗಡಿಗೆ ಭೇಟಿ ನೀಡಿದ ಶ್ರೀಕಾಂತ್ ಅವರು, ರಾತ್ರಿ ವೇಳೆ ಟೀ ಮಾರಾಟ ಮಾಡಬೇಕಾದರೆ ಇನ್ನು ಮುಂದೆ ತಿಂಗಳಿಗೆ 5 ಸಾವಿರ ಮಾಮೂಲಿ ನೀಡುವಂತೆ ಹೇಳಿದಾಗ, ಇದಕ್ಕೆ ನಾರಾಯಣಕುಮಾರ್ ನಿರಾಕರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಪಿಎಸ್‍ಐ ಶ್ರೀಕಾಂತ್ ಜೂನ್ 5 ರಂದು ರಾತ್ರಿ 11 ಗಂಟೆಗೆ ಟೀ ಅಂಗಡಿಗೆ ತೆರಳಿ ಕುಮಾರ್ ಅಂಗಡಿಯಲ್ಲಿದ್ದ ಗ್ರಾಹಕರ ಮೇಲೆ ಏಕಾಏಕಿ ಲಾಠಿಯಿಂದ ಹೊಡೆದು ಹಲ್ಲೆ ಮಾಡಿ ಓಡಿಸಿರುವುದಲ್ಲದೆ, ಅಂಗಡಿಯಲ್ಲಿ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.

ಈ ಎಲ್ಲಾ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಇದರ ಫುಟೇಜ್‍ಗಳು ಮೊಬೈಲ್‍ನ ವಾಟ್ಸಪ್‍ಗಳಲ್ಲಿ ವೈರಲ್ ಆಗಿದ್ದವು. ಮಾಧ್ಯಮಗಳಲ್ಲಿ ಇದು ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್ ಅವರು ಶ್ರೀಕಾಂತ್ ಅವರನ್ನು ಅಮಾನತುಗೊಳಿಸಿ ಇಲ್ಲಿನ ಡಿವೈಎಸ್ಪಿ ವೇಣುಗೋಪಾಲ್ ಅವರಿಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin