ಅತ್ತ ಚೀನಾ-ಪಾಕ್ ಕೆಣಕುತ್ತಿರುವ ಸಂದರ್ಭದಲ್ಲೇ ಭಾರತ-ಜಪಾನ್-ಅಮೆರಿಕ ಸಮರಾಭ್ಯಾಸ

ಈ ಸುದ್ದಿಯನ್ನು ಶೇರ್ ಮಾಡಿ

Japan--01

ಚೆನ್ನೈ,ಜು.10- ಬಂಗಾಳಕೊಲ್ಲಿಯಲ್ಲಿ ಭಾರತ-ಅಮೆರಿಕ-ಜಪಾನ್ ರಾಷ್ಟ್ರಗಳ ನೌಕಾ ಸಮರಾಭ್ಯಾಸ ಇಂದಿನಿಂದ ವಿದ್ಯುಕ್ತವಾಗಿ ಆರಂಭವಾಗಿದೆ. ಅತ್ತ ಚೀನಾ ಮತ್ತು ಪಾಕಿಸ್ತಾನ ಭಾರತವನ್ನು ಕೆಣಕುತ್ತಿರುವ ಸಂದರ್ಭದಲ್ಲೇ ಈ ಮೂರು ದೇಶಗಳ ನೌಕಾ ಪ್ರಕಾರವಾದ ಮಲ್ಬಾರ್ ಪ್ರದರ್ಶನ ಹೆಚ್ಚು ಗಮನ ಸೆಳೆದಿದೆ.  ಅಮೆರಿದ ವಿಶ್ವದ ದೊಡ್ಡ ಯುದ್ಧ ನೌಕೆ ಯುಎಸ್‍ಎಸ್ ನಿಮಿಟ್ಸಜ್, ಕ್ಷಿಪಣಿ ವಾಹಕ ನೌಕೆ ಯುಎಸ್‍ಎಸ್ ಪ್ರಿನ್ಸ್‍ಟನ್, ಕ್ಷಿಪಣಿ ನಾಶಕ ನೌಕೆಗಳು(ಕೆಐಡಿಡಿ), ಲಾಸ್ ಏಂಜಲಿಸ್-ಸಬ್‍ಮರಿನ್ ಇವುಗಳು ನೌಕ ಸಮರ ಅಭ್ಯಾಸದ ಪ್ರಮುಖ ಆಕರ್ಷಣೆಗಳಾಗಿವೆ.

ಜಪಾನ್‍ನ ಜೆಎಸ್ ಇಜ್ಮೋ, ಜೆಎಸ್ ಸಜಾನಮಿ ಯುದ್ದ ನೌಕೆಗಳು ಸಹ ಮಲ್ಬಾರ್ ಪ್ರದರ್ಶನಲ್ಲಿ ಭಾಗವಹಿಸಿವೆ.   ಈ ಮೂರು ರಾಷ್ಟ್ರಗಳ ನಡುವೆ ಕಡಲ ಸಹಕಾರ ವಿಸ್ತರಣೆಯಾಗಿರುವುದು ಚೀನಾ ಮತ್ತು ಪಾಕಿಸ್ತಾನಕ್ಕೆ ಆತಂಕವನ್ನುಂಟು ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin