ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-07-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಗುಣಗಳ ಭೇದವನ್ನು ಗುಣಜ್ಞನಾದ ಪಂಡಿತನು ಬಲ್ಲನೇ ಹೊರತು ಬೇರೆಯವನು ತಿಳಿಯಲಾರನು. ಜಾಜಿ ಹೂ, ಮಲ್ಲಿಗೆ ಹೂಗಳ ಸುಗಂಧ ಭೇದವನ್ನು ಮೂಗು ಗೊತ್ತು ಮಾಡುತ್ತದೆ, ಕಣ್ಣಲ್ಲ. – ದೃಷ್ಟಂತಕಲಿಕಾ

Rashi

ಪಂಚಾಂಗ : ಸೋಮವಾರ, 10.07.2017

ಸೂರ್ಯ ಉದಯ ಬೆ.06.00 / ಸೂರ್ಯ ಅಸ್ತ ಸಂ.06.50
ಚಂದ್ರ ಅಸ್ತ ಬೆ.06.47 / ಚಂದ್ರ ಉದಯ ರಾ.07.47
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಆಷಾಢ ಮಾಸ
ಕೃಷ್ಣ ಪಕ್ಷ / ತಿಥಿ : ಪ್ರತಿಪತ್ (ಬೆ.11.26) / ನಕ್ಷತ್ರ: ಉತ್ತರಾಷಾಢ (ರಾ.07.09)
ಯೋಗ: ವೈಧೃತಿ (ಬೆ.11.08) / ಕರಣ: ಕೌಲವ-ತೈತಿಲ (ಬೆ.11.26-ರಾ.12.14)
ಮಳೆ ನಕ್ಷತ್ರ: ಆರಿದ್ರ / ಮಾಸ: ಮಿಥುನ / ತೇದಿ: 26


ರಾಶಿ ಭವಿಷ್ಯ :

ಮೇಷ : ದೂರ ಪ್ರಯಾಣವನ್ನು ಮುಂದೆ ಹಾಕು ವುದು ಒಳಿತು, ತುಸು ಜವಾಬ್ದಾರಿ ಹೆಚ್ಚುವುದು
ವೃಷಭ : ತರಬೇತಿ ಕಾರ್ಯಗಳಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಸಾಧ್ಯತೆ ಇದೆ
ಮಿಥುನ: ಪರರ ಸಂಕಟಗಳನ್ನು ಸಹನೆ, ತಾಳ್ಮೆ ಯಿಂದ ಕೇಳಿ ಸೂಕ್ತ ಪರಿಹಾರ ಸೂಚಿಸುವಿರಿ,
ಕಟಕ : ಮಾತು ಕಡಿಮೆ ಮಾಡುವುದರಿಂದ ಹೆಚ್ಚಿನ ಮಾಹಿತಿ ಲಭ್ಯವಾಗುವುದು
ಸಿಂಹ: ಕೆಲವು ದಿನಗಳಿಂದ ಕಾಡು ತ್ತಿದ್ದ ಆತಂಕ ಕೊನೆಗೊಳ್ಳಲಿದೆ
ಕನ್ಯಾ: ಉಳಿತಾಯದ ಸಣ್ಣ ಮೊತ್ತ ದೊಡ್ಡ ಮೊತ್ತವಾಗಿ ಕೈ ಸೇರುವ ಸಂದರ್ಭ

ತುಲಾ: ಚಿಕ್ಕವರ ಮುನ್ನಡೆಗೆ ಸಹಕಾರ ನೀಡುವುದರಿಂದ ತೃಪ್ತಿ ಸಿಗಲಿದೆ
ವೃಶ್ಚಿಕ : ಕಂಪ್ಯೂಟರ್‍ನಿಂದ ದೂರ ಇದ್ದವರು ಅನಿವಾರ್ಯ ವಾಗಿ ಈ ವ್ಯವಸ್ಥೆಯಲ್ಲಿ ಕೆಲಸ ಮಾಡಬೇಕಾಗುವುದು
ಧನುಸ್ಸು: ಹೊಸ ಕೆಲಸಗಳ ಆರಂಭಕ್ಕೆ  ಸೂಕ್ತ ಕಾಲ
ಮಕರ: ಮನದಲ್ಲಿ ನೆಮ್ಮದಿ ವಾತಾವರಣ
ಕುಂಭ: ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಮೀನ: ಅಧಿಕ ಸುತ್ತಾಟದಿಂದ ಆಯಾಸವಾಗುವುದು


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin