ಕಾಲುವೆಗೆ ಬಿದ್ದಿದ್ದ ಕುರಿ ರಕ್ಷಿಸಲು ಹೋಗಿ ಕುರಿಗಾಹಿಗಳಿಬ್ಬರು ನೀರು ಪಾಲು

ಈ ಸುದ್ದಿಯನ್ನು ಶೇರ್ ಮಾಡಿ

Suicide-Water-02

ರಾಯಚೂರು, ಜು.10- ಕಾಲುವೆಗೆ ಬಿದ್ದಿದ್ದ ಕುರಿ ರಕ್ಷಿಸಲು ಹೋಗಿ ಇಬ್ಬರು ಕುರಿಗಾಹಿಗಳು ನೀರು ಪಾಲಾಗಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಗಟನಾಳ ಗ್ರಾಮದಲ್ಲಿ ಸಂಭವಿಸಿದೆ.  ಜೋಳಕುರುಡಿ ಮೂಲದ ಹಾಲಪ್ಪ (48), ಬಸವ (30) ಇವರಿಬ್ಬರು ಕುರಿ ಮೇಯಿಸುತ್ತಿದ್ದಾಗ ಎರಡು ಕುರಿಗಳು ತುಂಗಭದ್ರಾ ನಾಲೆ ದಂಡೆಯಲ್ಲಿ ಮೇಯುತ್ತಿದ್ದವು. ಮೇಯುತ್ತಿದ್ದ ಎರಡು ಕುರಿಗಳು ಕಾಲು ಜಾರಿ ನಾಲೆಗೆ ಬಿದ್ದವು. ಕೂಡಲೇ ಅವುಗಳನ್ನು ರಕ್ಷಿಸಲು ಹಾಲಪ್ಪ ಮತ್ತು ಬಸವ ಇಬ್ಬರು ಕಾಲುವೆಯಲ್ಲಿ ಇಳಿದಿದ್ದಾರೆ. ಆಗ ಕುರಿ ಸಮೇತ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕಬ್ಬೂರು ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin