ಭಾರತದ ಆರ್ಥಿಕ ಸುಧಾರಣೆಗೆ ಜಿ-20 ರಾಷ್ಟ್ರಗಳು ಶ್ಲಾಘನೆ

ಈ ಸುದ್ದಿಯನ್ನು ಶೇರ್ ಮಾಡಿ

G20-Summit

ಹ್ಯಾಮ್‍ಬರ್ಗ್,ಜು.10-ಇಲ್ಲಿ ನಡೆದ ಜಿ-20 ಶೃಂಗ ಸಭೆಯಲ್ಲಿ ಭಾರತ ತೆಗೆದುಕೊಂಡಿರುವ ಆರ್ಥಿಕ ಸುಧಾರಣೆಗೆ ಇತರ ರಾಷ್ಟ್ರಗಳು ಶ್ಲಾಘನೆ ವ್ಯಕ್ತಪಡಿಸಿವೆ.ಸುಸ್ಥಿರ ಆರ್ಥಿಕ ಬೆಳವಣಿಗೆ, ಹಣಕಾಸು ಕ್ಷೇತ್ರ, ಉದ್ಯಮಕ್ಕೆ ಉತ್ತೇಜನ ಹಾಗೂ ಕಾರ್ಮಿಕರ ಸುಧಾರಣೆಗೆ ಭಾರತ ಕೈಗೊಂಡಿರುವ ಕ್ರಮಗಳನ್ನು ಜಿ-20 ರಾಷ್ಟ್ರಗಳು ಶ್ಲಾಘಿಸಿವೆ.  ನವೋದ್ಯಮದ (ಸ್ಟಾರ್ಟಪ್) ಮೂಲಕ ಭಾರತವು ಬಾಹ್ಯ ವಾಣಿಜ್ಯ ಸಾಲ (ಇಸಿಬಿ) ಒದಗಿಸುತ್ತಿದೆ. ದೇಶದಲ್ಲಿ ಉದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿರುವುದರ ಜತೆಗೆ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಜಿ-20 ಸದಸ್ಯ ರಾಷ್ಟ್ರಗಳು ಈ ವರ್ಷ ಕೈಗೊಂಡಿರುವ ಕ್ರಮಗಳಲ್ಲಿ ಸೇರಿದೆ.

ಅವುಗಳನ್ನ ಭಾರತ ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದೆ ಎಂದು ಜಿ-20 ರಾಷ್ಟ್ರಗಳು ಹೇಳಿವೆ.  ಉದ್ಯಮಕ್ಕೆ ಉತ್ತೇಜನ ನೀಡುವ ರಾಷ್ಟ್ರಗಳ ವಿಶ್ವಬ್ಯಾಂಕ್ ಪಟ್ಟಿಯಲ್ಲಿ ಕಳೆದ ವರ್ಷ ಭಾರತವು 130ನೇ ಸ್ಥಾನದಲ್ಲಿತ್ತು. ಇದನ್ನು 50ರ ಒಳಗಿರುವಂತೆ ಮಾಡುವುದೇ ನಮ್ಮ ಗುರಿ ಎಂದು ಎನ್‍ಡಿಎ ಸರ್ಕಾರ ಕಳೆದ ವರ್ಷ ಹೇಳಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin