ಈಶ್ವರಪ್ಪ ಪಿಎ ಅಪಹರಣ ಪ್ರಕರಣಕ್ಕೆ ಹೊಸ ತಿರುವು

ಈ ಸುದ್ದಿಯನ್ನು ಶೇರ್ ಮಾಡಿ

Eshwarappa-010

ಬೆಂಗಳೂರು, ಜು.11- ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅವರ ಅಪಹರಣ ಯತ್ನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.  ಈ ಪ್ರಕರಣದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ರಾಜೇಂದ್ರ ಅರಸ್ ಅವರ ಕೈವಾಡ ಇದೆ ಎಂದು ಹೇಳಲಾಗಿದೆ.
ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿರುವ ರಾಜೇಂದ್ರ ಅರಸ್ ಅವರ ಅಣತಿಯಂತೆ ಇವರ ಕಿಡ್ನಾಪ್ ಪ್ರಯತ್ನ ಮಾಡಲಾಗಿತ್ತು ಎಂದು ವಿಚಾರಣೆ ವೇಳೆ ಈ ಪ್ರಕರಣದ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

ವಿನಯ್ ಅಪಹರಣ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರಾಜೇಂದ್ರ ಅರಸ್ ಅವರನ್ನು ವಶಕ್ಕೆ ಪಡೆದಿರುವ ಮಹಾಲಕ್ಷ್ಪಿಲೇಔಟ್ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕಳೆದ ಮೇ ತಿಂಗಳು ವಿನಯ್ ಅವರನ್ನು ಕಿಡ್ನಾಪ್ ಮಾಡಲಾಗಿತ್ತು. ಕಿಶೋರ್, ಶಿವಪ್ಪ ಸೇರಿದಂತೆ 6 ಮಂದಿ ಸೇರಿ ಇವರನ್ನು ಅಪಹರಿಸಿದ್ದರೆಂದು ದೂರು ದಾಖಲಾಗಿತ್ತು.  ಮೂತ್ರ ಮಾಡಿ ಬರುವುದಾಗಿ ಎಚ್‍ಎಎಲ್ ಪೊಲೀಸರಿಂದ ತಪ್ಪಿಸಿಕೊಂಡ ಪ್ರಶಾಂತ್ ಎಂಬ ಆರೋಪಿ ಕೂಡ ಇದೇ  ಪ್ರಕರಣದಲ್ಲಿ ಭಾಗಿಯಾಗಿದ್ದು, ರಾಜೇಂದ್ರ ಅರಸ್ ಅಣತಿಯಂತೆ ವಿನಯ್‍ನನ್ನು ಕಿಡ್ನಾಪ್ ಮಾಡಲು ಹೇಳಿದ್ದ. ಎಚ್‍ಎಎಲ್ ಪೊಲೀಸರು ಮಹಾಲಕ್ಷ್ಮಿಲೇಔಟ್ ಪೊಲೀಸರಿಗೆ ಒಪ್ಪಿಸಲು ಕರೆತರುವ ವೇಳೆ ಮೂತ್ರ ಮಾಡುವುದಾಗಿ ಹೇಳಿ ತಪ್ಪಿಸಿಕೊಂಡಿದ್ದ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin