ಕನಕಪುರ ಬಳಿ ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಐವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident

ಕನಕಪುರ, ಜು. 11 : ಕನಕಪುರ ತಾಲೂಕಿನ ತೊಪ್ಪಗಾನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ವಿಫ್ಟ್ ಕಾರಿನಲ್ಲಿದ್ದ ಬೆಂಗಳೂರು ಮೂಲದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ದುರಂತ ಸಂಭವಿಸಿದ್ದು, ಕನಕಪುರ ತಾಲೂಕಿನ ತೊಪ್ಪಗಾನಹಳ್ಳಿ ಬಳಿ ಕನಕಪುರ ಕಡೆಯಿಂದ ಹೊರಟಿದ್ದ ಸ್ವಿಫ್ಟ್ ಕಾರು ಹಾಗೂ ಬೆಂಗಳೂರು ಕಡೆಯಿಂದ ಬರುತ್ತಿದ್ದ ಕ್ಯಾಂಟರ್ ಮುಖಾಮುಖಿ ಡಿಕ್ಕಿ ಹೊಡೆದಿವೆ. ಈ
ಘಟನೆಯಲ್ಲಿ ಬೆಂಗಳೂರಿನ ಸಂತೋಷ್, ಅನಿಲ್ ಕುಮಾರ್ ಹಾಗೂ ಚಂದ್ರು ಹಾಗೂ ಇನ್ನಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕ್ಯಾಂಟರ್‌ ವಾಹನ ಚಾಲಕನ ಕಾಲು ಮುರಿದಿದೆ.

ಘಟನೆಯಲ್ಲಿ ಸ್ವಿಫ್ಟ್ ಕಾರು ಹಾಗೂ ಕ್ಯಾಂಟರ್ ಎರಡೂ ಸಹ ನಜ್ಜುಗುಜ್ಜಾಗಿದ್ದು ಐವರ ಮೃತದೇಹಗಳು ಕಾರಿನಲ್ಲಿ ಸಿಲುಕಿ ಕೊಂಡಿದ್ದವು. ಪೊಲೀಸರು ಹಾಗೂ ಸಾರ್ವಜನಿಕರು ಹರ ಸಾಹಸಪಟ್ಟು ಮೃತದೇಹಗಳನ್ನು ಹೊರತೆಗೆದಿದ್ದು ಕನಕಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin