ಕಾವೇರಿ ನದಿ ದಡದಲ್ಲಿ ಕಾಡಾನೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Elephant--001

ಮಳವಳ್ಳಿ, ಜು.11- ತಾಲ್ಲೂಕಿನ ಹಲಗೂರು ಹೋಬಳಿಯ ತಾಳವಾಡಿ ಮತ್ತು ಭೀಮೇಶ್ವರಿಯ ಸಮೀಪದ ಕಾವೇರಿ ನದಿಯ ಕೂಟ್ಲೆಯ ಬಳಿ ಸುಮಾರು 3 ವರ್ಷದ ಕಾಡಾನೆ ಮೃತಪಟ್ಟಿರುವುದು ಪತ್ತೆಯಾಗಿದೆ.  ಅರಣ್ಯಾಧಿಕಾರಿಗಳು ಗಸ್ತಿನಲ್ಲಿದ್ದಾಗ ಕಾಡಾನೆ ಸತ್ತು ಬಿದ್ದಿರುವುದು ಪತ್ತೆಯಾಗಿದ್ದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆನೆಯ ದೇಹದ ಮೇಲೆ ಗಾಯಗಳಾಗಿರುವುದರಿಂದ ಆನೆಯ ಹಿಂಡಿನಲ್ಲಿ ಕಾದಾಟ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಮರಣೋತ್ತರ ಪರೀಕ್ಷೆಯ ವರದಿ ನಂತರ ನಿಖಲ ಕಾರಣ ತಿಳಿದು ಬರಲಿದೆ ಎಂದು ಅರಣ್ಯಾಧಿಕಾರಿ ಪ್ರವೀಣ್‍ಕುಮಾರ್ ತಿಳಿಸಿರುತ್ತಾರೆ. ಆನೆಯ ಶವಪರೀಕ್ಷೆಯ ನಂತರ ಕಾಡಾನೆಯ ಶವದ ಅಂತ್ಯಕ್ರಿಯೆಯನ್ನು ನಡೆಸಿರುತ್ತಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin