ಮಿಸ್ಸಿಸ್ಸಿಪ್ಪಿಯಲ್ಲಿ ಅಮೆರಿಕ ಸೇನಾ ವಿಮಾನ ಪತನ , 16 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Mississippi

ವಾಷಿಂಗ್ಟನ್, ಜು.11-ಅಮೆರಿಕ ಸೇನಾ ವಿಮಾನವೊಂದು ಅಪಘಾತಕ್ಕೀಡಾಗಿ 16 ಮಂದಿ ಮೃತಪಟ್ಟಿರುವ ಘಟನೆ ಮಿಸ್ಸಿಸ್ಸಿಪ್ಪಿ ರಾಜ್ಯದಲ್ಲಿ ಸಂಭವಿಸಿದೆ. ಕರಾವಳಿ ರಕ್ಷಣಾ ಪಡೆಗೆ ಸೇರಿದ ವಿಮಾನದಲ್ಲಿದ್ದ ಎಲ್ಲಾ 16 ಸಿಬ್ಬಂದಿ ಈ ದುರಂತದಲ್ಲಿ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ತುರ್ತು ಸೇವೆಗಳ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಸಿಎನ್‍ಎನ್ ವರದಿ ಮಾಡಿದೆ. ಮಿಸ್ಸಿಸ್ಸಿಪ್ಪಿ ದಕ್ಷಿಣ ಭಾಗದಲ್ಲಿ ವಿಮಾನ ಪತನಗೊಂಡಿದೆ. ಯಾರೂ ಬದುಕುಳಿದಿರುವ ಸಾಧ್ಯತೆಗಳಿಲ್ಲ ಎಂದು ಲೆಫ್ರೋರ್ ಕೌಂಟಿ ಎಮರ್ಜೆನ್ಸಿ ಮ್ಯಾನೇಜ್‍ಮೆಂಟ್ ನಿರ್ದೇಶಕ ಫ್ರೆಡ್ ರಾಂಡ್ಲೆ ತಿಳಿಸಿದ್ಧಾರೆ.   ವಿಮಾನ ಅಪಘಾತದ ಕಾರಣದ ಬಗ್ಗೆ ತನಿಖೆ ಮುಂದುವರಿದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin