ಗುರು ಗ್ರಹದ ಮೇಲೆ ನಾಸಾ ಸಂಶೋಧನೆ ಯಶಸ್ವಿ

ಈ ಸುದ್ದಿಯನ್ನು ಶೇರ್ ಮಾಡಿ

Guru

ವಾಷಿಂಗ್ಟನ್, ಜು.12- ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾ ಸೌರಮಂಡಲದ ಅತಿದೊಡ್ಡ ಗ್ರಹ ಗುರು ಮೇಲೆ ನಡೆಸಿದ ಹೊಸ ಪ್ರಯೋಗವೊಂದು ಯಶಸ್ವಿಯಾಗಿದೆ.  ಜ್ಯೂಪಿಟರ್‍ನ ಗ್ರೇಟ್ ರೆಡ್ ಸ್ಪಾಟ್ (ಮಹಾ ಕೆಂಪು ಕಲೆ) ಪ್ರದೇಶದ ಮೇಲೆ ನಾಸಾದ ಗಗನನೌಕೆ ಜುನೋ ಯಶಸ್ವಿಯಾಗಿ ಹಾರಿ ಹೋಗಿದೆ. ಇದು ಜುನೋ ನೌಕೆಯ ಆರನೇ ಜೋತಿರ್ಮಂಡಲದ ಕಕ್ಷೆ ಯಾತ್ರೆಯಾಗಿದ್ದು, ಈವರೆಗೆ ಯಾವುದೇ ವಾಹನವೂ ಇಷ್ಟು ಸನಿಹದಲ್ಲಿ ಬೃಹತ್ ಅನಿಲ ಹೊಂದಿರುವ ಗುರು ಗ್ರಹದ ಸನಿಹಕ್ಕೆ ಹೋಗಿಲ್ಲ.

ಜುಲೈ 10ರಂದು ಜುನೋ ಅಂತರಿಕ್ಷ ನೌಕೆಯು ಅತ್ಯಂತ ನಿಗೂಢವಾದ 10,000 ಮೈಲಿ ವ್ಯಾಪ್ತಿಯ ಮಾರುತ ಪ್ರದೇಶದ ದೃಶ್ಯವನ್ನು ಅತ್ಯಂತ ಹತ್ತಿರದಿಂದ ಸೆರೆ ಹಿಡಿದಿದೆ. ಇದು ಗುರು ಗ್ರಹದ ಮುಂದಿನ ಸಂಶೋಧನೆ ಮೇಲೆ ಬೆಳಕು ಚೆಲ್ಲಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin