ಸಿಎಂಗೆ ಸರ್ಕಾರಿ ಕಾರ್ಯಕ್ರಮಗಳ ಸುಧಾರಿತ ವ್ಯವಸ್ಥೆ ಕುರಿತ ಶ್ರೀನಿವಾಸನ್ ಸಮಿತಿ ವರದಿ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

CM
ಬೆಂಗಳೂರು, ಜು.12-ಸರ್ಕಾರದ ಕಾರ್ಯ ಕ್ರಮಗಳ ಪ್ರಚಾರದಲ್ಲಿ ಸುಧಾರಿತ ವ್ಯವಸ್ಥೆ ಅಳವಡಿಸಿಕೊಳ್ಳುವುದೂ ಸೇರಿದಂತೆ ವಾರ್ತಾ ಇಲಾಖೆಯ ಕಾರ್ಯವೈಖರಿ ಪರಿಣಾಮಕಾರಿ ಯಾಗಿಸಲು ಕೈಗೊಳ್ಳಬೇಕಾಗಿರುವ ಅಂಶಗಳನ್ನು ಒಳಗೊಂಡ ವರದಿಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ.  ಸಮಿತಿಯ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸ್ ಅವರು ಇಂದು 110 ಅಧ್ಯಾಯಗಳ 120 ಪುಟಗಳನ್ನೊಳಗೊಂಡ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು.

ವಾರ್ತಾ ಇಲಾಖೆ ಸರ್ಕಾರದ ಕಾರ್ಯಕ್ರಮ ಗಳಿಗೆ ಹೆಚ್ಚು ಪ್ರಚಾರ ಕೊಡಬೇಕು. ಅದರಲ್ಲೂ ಅಂತಾರಾಜ್ಯ ಮಟ್ಟದಲ್ಲೂ ಕಾರ್ಯಕ್ರಮ ತಲುಪುವ ನಿಟ್ಟಿನಲ್ಲಿ ಪ್ರಚಾರ ಇರಬೇಕು. ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಬಿಂಬಿಸಲಾದ ಸಮಸ್ಯೆಗಳು ಮತ್ತು ದೂರುಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಂಡು ಆಯಾ ಇಲಾಖೆ ಮೂಲಕ ಆ ಕೆಲಸ ಮಾಡಿಸಲು ನೋಡಲ್ ಏಜೆನ್ಸಿಯಂತೆ ಇಲಾಖೆ ಕಾರ್ಯನಿರ್ವಹಿಸಬೇಕು. ಯಾವ ಹಂತದಲ್ಲಿ ಏನೇನು ಸುಧಾರಣೆ ಮಾಡಬೇಕು ಎಂಬ ಬಗ್ಗೆ ಸುದೀರ್ಘ ವರದಿಯನ್ನು ಸಲ್ಲಿಸಿದೆ.

ಕಳೆದ ಜನವರಿಯಲ್ಲಿ ರಚಿಸಲಾಗಿದ್ದ ಸಮಿತಿ ಇದೀಗ ವರದಿ ನೀಡಿದ್ದು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವ ಅಗತ್ಯವಿದೆ. ಇದಕ್ಕಾಗಿ ಪ್ರಚಾರ ಮತ್ತಷ್ಟು ಉತ್ತಮಗೊಳ್ಳಬೇಕು, ಸುಧಾರಿತ ವ್ಯವಸ್ಥೆಗಳು ಅಳವಡಿಕೆಯಾಗಬೇಕು ಎಂದು ಸೂಚಿಸಲಾಗಿದೆ.  ವರದಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಷ್ಠಾನಕ್ಕೆ ಒಪ್ಪಿಗೆ ಪಡೆಯ ಲಾಗುವುದು ಎಂದು ಭರವಸೆ ನೀಡಿದರು.  ಈ ವೇಳೆ ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್, ಜಂಟಿ ನಿರ್ದೇಶಕ ದಿನೇಶ್, ಅಧಿಕಾರಿಗಳಾದ ಇಸ್ಮಾಯಿಲ್ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin