ಸರ್ಜನ್ ಹಾಗೂ ವೈದ್ಯರಿಗೆ 5 ಲಕ್ಷದವರೆಗೂ ವೇತನ ನಿಗದಿ

ಈ ಸುದ್ದಿಯನ್ನು ಶೇರ್ ಮಾಡಿ

doctor

ಬೆಂಗಳೂರು,ಜು.12-ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಶ್ರೇಣಿಯ ವೈದ್ಯರು ಹಾಗೂ ಸರ್ಜನ್ ಹುದ್ದೆಗಳಿಗೆ ರಾಜ್ಯ ಸರ್ಕಾರ ಐದು ಲಕ್ಷದವರೆಗೂ ವೇತನವನ್ನು ನಿಗದಿಪಡಿಸಿದೆ.   ರಾಜ್ಯದ ಇತಿಹಾಸದಲ್ಲೇ ಸರ್ಕಾರಿ ಅಧಿಕಾರಿಗಳಿಗೆ 5 ಲಕ್ಷದವರೆಗೆ ವೇತನ ನಿಗದಿಪಡಿಸಿರುವ ವಿರಳ ಪ್ರಕರಣ ಇದಾಗಿದೆ. ನಿಮ್ಮ ಖೋಟಾ, ನಮ್ಮ ಹುದ್ದೆ ಎಂಬ ಯೋಜನೆಯಡಿ ಬಿಡ್ ಮೂಲಕ ಆರೋಗ್ಯ ಇಲಾಖೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಜಿಲ್ಲಾ , ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಒಟ್ಟು 1212 ವಿವಿಧ ಹುದ್ದೆಗಳು ಖಾಲಿ ಉಳಿದಿದ್ದವು. ಕೈತುಂಬ ವೇತನ ನೀಡುವುದಾಗಿ ಹೇಳಿದ್ದರೂ ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸಲು ವೈದ್ಯಕೀಯ ವಿದ್ಯಾರ್ಥಿಗಳು ಮುಂದೆ ಬರುತ್ತಿರಲಿಲ್ಲ. ಗ್ರಾಮೀಣ ಸೇವೆಯನ್ನು ಕಡ್ಡಾಯಗೊಳಿಸಿದ್ದರೂ ಬಹುತೇಕ ವೈದ್ಯರು ಖಾಸಗಿಯತ್ತಲೇ ಮುಖ ಮಾಡುತ್ತಿದ್ದರು.  ಇತ್ತೀಚೆಗೆ ಆರೋಗ್ಯ ಇಲಾಖೆ ಬಿಡ್ ಮೂಲಕ ವೈದ್ಯರ ಹುದ್ದೆಗಳನ್ನು ತುಂಬಲು ಮುಂದಾಗಿತ್ತು. 1212 ಹುದ್ದೆಗಳಿಗೆ ಈವರೆಗೂ 2883 ಅರ್ಜಿಗಳು ಬಂದಿವೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ, ದಾವಣಗೆರೆ, ಮಂಗಳೂರು, ಬೀದರ್, ಕಲಬುರಗಿ, ಯಾದಗಿರಿ ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಿಂದಲೂ ಆಕಾಂಕ್ಷಿಗಳು ಬಿಡ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.  ಅನೆಸ್ತ್ಟಿಕ್, ಜನರಲ್ ಸರ್ಜನ್ , ಪೆಡಿಯಾಸ್ಟ್ರಿಷಿಯನ್, ಅಬ್ಸ್ಟರ್‍ಟ್ರಿಷಿಯನ್, ಆರ್ಥೋಪೆಡಿಸ್ಟ್ , ಫಿಜಿಷಿಯನ್, ಆರ್ಥೋಮೊಲಾಜಿಸ್ಟ್, ಇಎನ್‍ಟಿ ಸ್ಪೆಷಲಿಸ್ಟ್, ಡೆರ್ಮಟಲಾಜಿಸ್ಟ್ , ಫಿಸಿಯಾಟ್ರಿಸ್ಟ್ , ರೇಡಿಯಾಲಿಜಿಸ್ಟ್ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಹಾಕಲಾಗಿದೆ.
ಇದರಲ್ಲಿ ಅನೆಸ್ತ್ಟಿಕ್ ಹುದ್ದೆಗೆ 80 ಸಾವಿರದಿಂದ 4 ಲಕ್ಷ , ಜನರಲ್ ಸರ್ಜನ್‍ಗೆ 60 ಸಾವಿರದಿಂದ 4 ಲಕ್ಷ , ಪೆಡಿಯಾಸ್ಟ್ರಿಷ್ಯನ್‍ಗೆ 70 ಸಾವಿರದಿಂದ ನಾಲ್ಕೂವರೆ ಲಕ್ಷ , ಅಬ್ಸ್ಟರ್‍ಟ್ರಿಷಿಯನ್‍ಗೆ 80 ಸಾವಿರದಿಂದ 5 ಲಕ್ಷ , ಫಿಷಿಯನ್‍ಗೆ 65ರಿಂದ 5 ಲಕ್ಷ , ಆರ್ಥೋಪೆಡಿಸ್ 95.5 ಲಕ್ಷದಿಂದ 5 ಲಕ್ಷ , ಇಎನ್‍ಟಿ ಸ್ಪೆಷಲಿಸ್ಟ್‍ಗೆ 70 ಸಾವಿರದಿಂದ 3.5 ಲಕ್ಷ , ಡೆರ್ಮಟಲಾಜಿಸ್ಟ್ ಗೆ 80 ಸಾವಿರದಿಂದ 3 ಲಕ್ಷ, ಫಿಸಿಯಾಟ್ರಿಸ್ಟ್ ಒಂದು ಲಕ್ಷದಿಂದ 2 ಲಕ್ಷ , ರೇಡಿಯಾಲಿಜಿಸ್ಟ್ 1.2 ಲಕ್ಷದಿಂದ 3.5 ಲಕ್ಷ ರೂ. ವೇತನ ನಿಗದಿ ಮಾಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin