ಹ್ಯಾಟ್ರಿಕ್ ಹೀರೋಗೆ 55 ನೇ ಹುಟ್ಟುಹಬ್ಬ

ಈ ಸುದ್ದಿಯನ್ನು ಶೇರ್ ಮಾಡಿ

Shivarajkuma-01

ಬೆಂಗಳೂರು, ಜು.12-ತಮ್ಮ ತಾಯಿಯ ನಿಧನದ ಹಿನ್ನೆಲೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ನಿರ್ಧರಿಸಿದ್ದು, ಶುಭಾಶಯ ಕೋರಲು ಬಂದ ತಮ್ಮ ಅಭಿಮಾನಿಗಳ ಸಂತಸದಲ್ಲಿ ಮಾತ್ರ ಭಾಗಿಯಾಗಿದ್ದರು.  ಡಾ.ಶಿವರಾಜ್‍ಕುಮಾರ್ ಅವರು ಆನಂದ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ನಂತರ ರಥಸಪ್ತಮಿ, ಮನ ಮೆಚ್ಚಿದ ಹುಡುಗಿ, ಜನುಮದ ಜೋಡಿ, ರಣರಂಗ, ವಜ್ರಕಾಯ, ಶಿವಲಿಂಗ, ಜೋಗಿ, ಜೋಗಿ-2, ಚೆಲುವೆಯೇ ನಿನ್ನ ನೋಡಲು, ಮಾದೇಶ, ನಂಜುಂಡಿ, ಕಡ್ಡಿಪುಡಿ ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ಅಭಿಮಾನಿಗಳಿಗೆ ನೀಡಿದ್ದಾರೆ.

Shivanna--03

ಶಿವರಾಜ್‍ಕುಮಾರ್ ಅವರ 55ನೆ ಹುಟ್ಟುಹಬ್ಬವನ್ನು ಆಚರಿಸಲು ಕರ್ನಾಟಕದ ನಾನಾ ಮೂಲೆಗಳಿಂದ ಅವರ ಮನೆಗೆ ಆಗಮಿಸಿದ್ದರು. ಅವರು ತಂದ ಕೇಕ್‍ಗಳನ್ನು ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಚರಿಸಿಕೊಂಡರು.   ಇದೇ ಸಂದರ್ಭದಲ್ಲಿ ಶಿವರಾಜ್‍ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರದ ಟೀಸರ್ ಹಾಗೂ ಮಫ್ತಿ ಚಿತ್ರದ ಟೀಸರ್‍ಅನ್ನು ಚಿತ್ರತಂಡ ಬಿಡುಗಡೆ ಮಾಡಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Shivanna--05

Shivanna--02

Facebook Comments

Sri Raghav

Admin