3 ತಿಂಗಳ ಹಸುಗೂಸನ್ನು ಕೆರೆಗೆ ಎಸೆದ ನಿರ್ದಯಿ ತಾಯಿ..!

ಈ ಸುದ್ದಿಯನ್ನು ಶೇರ್ ಮಾಡಿ

Bab01

ಬೆಳಗಾವಿ, ಜು.12- ಅತಿಯಾದ ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಮೂರು ತಿಂಗಳ ಕುಡಿಯನ್ನು ಚಿಕಿತ್ಸೆ ಕೊಡಿಸಲು ಹಣವಿಲ್ಲವೆಂದು ನಿರ್ದಯಿ ತಾಯಿಯೊಬ್ಬಳು ಕೆರೆಗೆ ಎಸೆದಿರುವ ಮನಕಲಕುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನ ಮರಡಿ ಗ್ರಾಮದ ನಿವಾಸಿ ಶೃತಿ ಎಂಬ ಮಹಿಳೆಯನ್ನು ಘಟನೆ ಸಂಬಂಧ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಒಂದು ಕಡೆ ಅತಿಯಾದ ಬಡತನ, ಮತ್ತೊಂದು ಕಡೆ ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದ ಮೂರು ತಿಂಗಳ ಗಂಡು ಮಗುವಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದಿರುವುದು. ಈ ಕಾರಣದಿಂದ ಮನನೊಂದಿದ್ದ ನಿರ್ದಯಿ ತಾಯಿ ಮಗುವನ್ನು ಕೆರೆಗೆ ಎಸೆದು ಸಾಯಿಸಿದ್ದಾಳೆ. ಘಟನೆ ಸಂಬಂಧ ಯಮಕನ ಮರಡಿ ಪೊಲೀಸರು ಶೃತಿಯನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin