ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಶೋಭಾ ಕರಂದ್ಲಾಜೆಗೆ ಜೀವ ಬೆದರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Shobha--01

ಬೆಂಗಳೂರು, ಜು.13 – ಕೋಮುಗಲಭೆಯಿಂದಾಗಿ ಕಳೆದ ಒಂದೂವರೆ ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆ ಹತ್ತಿ ಉರಿಯುತ್ತಿರುವ ಬೆನ್ನಲ್ಲೇ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಕೆಲ ಸಮಾಜಘಾತುಕ ಶಕ್ತಿಗಳು ಈ ಇಬ್ಬರಿಗೆ ನೀವು ಸುಮ್ಮನಿರದಿದ್ದರೆ ಸದ್ಯದಲ್ಲೇ ಗುಂಡು ಹೊಡೆದು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ತಿಳಿದುಬಂದಿದೆ.   ಈ ಹಿನ್ನೆಲೆಯಲ್ಲಿ ಶೋಭ ಕರಂದ್ಲಾಜೆ ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಸಮಾಜಘಾತುಕ ಶಕ್ತಿಗಳಿಂದ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಮುಂದಾಗಿದೆ.

ಜೀವ ಬೆದರಿಕೆ ಕರೆ ಬಂದಿರುವುದನ್ನು ಖುದ್ದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರೇ ಉಭಯ ನಾಯಕರಿಗೆ ಮಾಹಿತಿ ನೀಡಿದ್ದಾರೆ. ಕೆಲ ಮೂಲಭೂತ ಸಂಘಟನೆಗಳಿಂದ ನಿಮ್ಮ ಜೀವಕ್ಕೆ ಅಪಾಯವಿದ್ದು ಹೆಚ್ಚಿನ ನಿಗಾವಹಿಸಬೇಕೆಂದು ಸಲಹೆ ಮಾಡಿದ್ದಾರೆ.   ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಗಲಭೆಯನ್ನು ವಿರೋಧಿಸಿ ನೀವು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಟೀಕೆ ಮಾಡುತ್ತಿದ್ದೀರಿ. ಅಲ್ಲದೆ ಕೆಲವು ಸಂಘಟನೆಗಳನ್ನು ನಿಷೇಧ ಮಾಡಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೀರಿ. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ನಿಮ್ಮ ಜೀವಕ್ಕೆ ಮುಳುವಾಗಲಿದೆ ಎಂದು ದೂರವಾಣಿ ಕರೆ ಮೂಲಕ ಬೆದರಿಕೆ ಒಡ್ಡಿದ್ದಾರೆ ಎಂದು ತಿಳಿದುಬಂದಿದೆ.  ಈಗಾಗಲೇ ಶೋಭಾ ಕರಂದ್ಲಾಜೆ ಈ ವಿಷಯವನ್ನು ಪಕ್ಷದ ನಾಯಕರ ಗಮನಕ್ಕೆ ತಂದಿದ್ದು ಗೃಹ ಇಲಾಖೆಗೆ ಹೆಚ್ಚಿನ ಭದ್ರತೆ ನೀಡಲು ಪತ್ರ ಬರೆಯಲು ತೀರ್ಮಾನಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin