ಕಾಂಗ್ರೆಸ್ ಶಾಂತಿ ಸಭೆಗೆ ಹೋಗುವ ಪ್ರಶ್ನೆಯೇ ಇಲ್ಲ : ಯಡಿಯೂರಪ್ಪ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-01

ಮಂಗಳೂರು,ಜು.13- ಶಾಂತಿ ಸಭೆಗೆ ಹಾಜರಾಗುವ ಪ್ರಶ್ನೆಯೇ ಇಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕರೆದಿರುವುದು ಯಾರ ಶಾಂತಿ ಸಭೆ, ಕಾಂಗ್ರೆಸ್‍ನವರ ಶಾಂತಿ ಸಭೆಯಾ? ಕೋಮು ಗಲಭೆಯನ್ನು ಹುಟ್ಟು ಹಾಕಿದವರ ನೇತೃತ್ವದಲ್ಲೇ ಸಭೆ ನಡೆಯುತ್ತಿದೆ. ಯಾರು ಬಲಿಯಾಗಿ ದ್ದಾರೋ ಆ ಸಂಘಟನೆಗೆ ಆಹ್ವಾನ ಇಲ್ಲ.

ಹಿಂದೂ ಸಂಘಟನೆಗಳಿಗೆ ಯಾಕೆ ಆಹ್ವಾನ ನೀಡಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.   ಎಸ್‍ಡಿಪಿಐ ನಂತಹ ಸಂಘಟನೆಗೆ ಆಹ್ವಾನ ನೀಡಲಾಗಿದೆ. ಇದು ಕೇವಲ ರಮಾನಾಥ ರೈ ಬೆಂಬಲಿಗರು, ಕಾಂಗ್ರೆಸ್ ಸಭೆಯಾ? ಅದಕ್ಕೆ ನಾವು ಹೋಗಬೇಕಾ? ಜಿಲ್ಲೆಯಲ್ಲಿ ಸ್ಪರ್ಧಿಸುವ ರಮಾನಾಥ್ ರೈ ಸವಾಲನ್ನು ಸ್ವೀಕರಿಸಿದ್ದೇನೆ. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ. ಅದಕ್ಕೆ ಇಂದಿನಿಂದ ಮೂರು ದಿನ ವಿಸ್ತಾರಕನಾಗಿ ಕೆಲಸ ಮಾಡುತ್ತೇನೆ. ರಮಾನಾಥ ರೈ ಅವರಿಗೆ ಸ್ವಲ್ಪ ವಿಶ್ರಾಂತಿ ಕೊಡಬೇಕು ಅಂತ ತೀರ್ಮಾನ ಮಾಡಿದ್ದೇವೆ ಎಂದು ಯಡಿಯೂರಪ್ಪ ಹರಿಹಾಯ್ದರು.

ಶರತï ಹತ್ಯೆ ನಡೆದು 9 ದಿನ ಆದ ಮೇಲೆ ಯಾರಿಗೂ ಹೇಳದೇ ರಮಾನಾಥ ರೈ ಶರತï ಮನೆಗೆ ಹೋಗಿದ್ದರು. ನಾವೆಲ್ಲಾ ಬಂದ ಮೇಲೆ ಅವರಿಗೆ ಜ್ಞಾನೋದಯ ಆಗಿದೆ. ಅದು ಅವರ ವಯಸ್ಸಿನ ಕಾರಣವೋ, ಉದ್ದೇಶ ಪೂರ್ವಕವೋ ಗೊತ್ತಿಲ್ಲ. ರಾಜಕಾರಣಿಗಳ ಶಬ್ದ ಪ್ರಯೋಗದ ಬಗ್ಗೆ ನಾನು ಪ್ರತಿಕ್ರಿಯಿಸಲು ಇಷ್ಟಪಡಲ್ಲ ಎಂದರು.  ಕೊಲೆಯಾದ ಶರತï ಮನೆಗೆ ಭೇಟಿ ಕೊಡುವ ಉದ್ದೇಶದಿಂದ ನಾನು ಮಂಗಳೂರಿಗೆ ಬಂದಿದ್ದೇನೆ. ಇದು ವ್ಯವಸ್ಥಿತ ಕೊಲೆ ಸಂಚು, ಸಿಎಂ ಕಾರ್ಯಕ್ರಮಕ್ಕಾಗಿ ಸಾವನ್ನು ಮುಚ್ಚಿಟ್ಟಿದ್ದು ಅಕ್ಷಮ್ಯ ಅಪರಾಧವೆಂದು ಬಿಎಸ್‍ವೈ ವಾಗ್ದಾಳಿ ನಡೆಸಿದರು. ರೈ, ಖಾದರ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಸ್ಪರ್ಧೆ ಜಿಲ್ಲೆಗೆ ಬಂದು ಸದಾನಂದ ಗೌಡ ಮತ್ತು ಶೋಭಾ ಕರಂದ್ಲಾಜೆ ಅವರಿಗೆ ಸ್ಪರ್ಧಿಸಲು ರಮಾನಾಥ ರೈ ಸವಾಲು ಹಾಕಿದ್ದು, ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿರುವುದು ಸಾಬೀತಾಗಿದೆ. ಇದುವರೆಗೆ ಈ ರೀತಿ 24 ಕೊಲೆ ಆಗಿವೆ. ಎಲ್ಲೂ ಕೂಡಾ ನಿಜವಾದ ಅಪರಾಧಿಗಳನ್ನು ಶಿಕ್ಷಿಸಿಲ್ಲ. ಸಿಎಂ ತಮ್ಮ ಜವಾಬ್ದಾರಿ ನಿರ್ವಹಿಸಿದೇ ಪೊಲೀಸರ ಮೇಲೆ ಹರಿಹಾಯ್ದಿದ್ದಾರೆ. ಕೆಂಪಯ್ಯ ಅವರನ್ನು ಈಗ ನಿಯೋಜಿಸಿರುವುದರಿಂದ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಆತ್ಮ ಗೌರವದಿಂದ ಕೆಲಸ ಮಾಡಲು ಸಾಧ್ಯವೇ? ಎಂದು ಬಿಎಸ್‍ವೈ ಪ್ರಶ್ನಿಸಿದರು.

ಸಿಎಂಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಯೋಗ್ಯತೆ, ಶಕ್ತಿ, ಆಸಕ್ತಿ ಯಾವುದೂ ಇಲ್ಲ. ರಾಜಕೀಯ ಲಾಭ ಪಡೆದು ಚುನಾವಣೆ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಶಾಂತಿ ಸಭೆಗೆ ಹೋಗುವ ಅವಶ್ಯಕತೆ ಇಲ್ಲ. ಅಶಾಂತಿ ಸೃಷ್ಟಿ ಮಾಡುವವರ ಜೊತೆ ಚರ್ಚೆ ಮಾಡುವುದರಿಂದ ಶಾಂತಿ ನೆಲೆಸುವುದಿಲ್ಲ. ಅವರು ಬರುತ್ತಿರೋದು ಶಾಂತಿ ಕದಡಲು ಹೊರತು ಶಾಂತಿ ಕಾಪಾಡಲು ಅಲ್ಲ. ಪರಿಸ್ಥಿತಿ ನೋಡಿಕೊಂಡು ಹೋರಾಟದ ರೂಪುರೇಷೆ ಬಗ್ಗೆ ನಿರ್ಧರಿಸುತ್ತೇವೆ. ಸಚಿವರಾದ ರಮಾನಾಥ ರೈ ಮತ್ತು ಯು.ಟಿ. ಖಾದರï ವಿರುದ್ಧ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸಿ ತೊರಿಸುತ್ತೇವೆ. ಅದನ್ನು ಸವಾಲಾಗಿ ಸ್ವೀಕರಿಸಿದ್ದೇವೆ ಎಂದು ಯಡಿಯೂರಪ್ಪ ಗುಡುಗಿದರು.

ಪರಪ್ಪನ ಅಗ್ರಹಾರದ ವಾಸ್ತವತೆ ಬಿಚ್ಚಿಟ್ಟಿದ್ದಾರೆ ಪರಪ್ಪನ ಅಗ್ರಹಾರದಲ್ಲಿ ಮಹಿಳಾ ಕೈದಿಗಳ ಸುರಕ್ಷತೆ ವಿಚಾರದ ಬಗ್ಗೆ ಸತ್ಯ ಸಂಗತಿಯನ್ನು ಕಾರಾಗೃಹ ಡಿಐಜಿ ರೂಪಾ ಹೇಳಿದ್ದಾರೆ. ಎಲ್ಲಿಯೂ ಬಿಗಿಯಾದ ಕ್ರಮ ಇಲ್ಲ. ಪೊಲೀಸ್ ಅಧಿಕಾರಿಗಳಿಗೆ ಗೌರವ ಇಲ್ಲ. ಎಲ್ಲ ರೀತಿಯಲ್ಲೂ ಕೂಡಾ ಗೃಹ ಇಲಾಖೆ ವಿಫಲವಾಗಿದೆ ಎಂಬುದಕ್ಕೆ ಇದು ಇನ್ನೊಂದು ನಿದರ್ಶನವೆಂದು ಯಡಿಯೂರಪ್ಪ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin