ದಾರಿ ತಪ್ಪಿದ ಸಿಎಂ ಸಿದ್ದರಾಮಯ್ಯನವರ ಹೆಲಿಕ್ಯಾಪ್ಟರ್

ಈ ಸುದ್ದಿಯನ್ನು ಶೇರ್ ಮಾಡಿ
Siddaramaiaha--01
ಸಾಂಧರ್ಭಿಕ ಚಿತ್ರ

ಕೊಪ್ಪಳ, ಜು.13- ತೊಂಡಿಯಾಳದಲ್ಲಿ ಲ್ಯಾಂಡ್ ಆಗಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಪೈಲೆಟ್‍ನ ಅತಾಚುರ್ಯದಿಂದ ಲಿಂಗಸೂರಿನಲ್ಲಿ ಲ್ಯಾಂಡ್ ಆಗಿ ಕೆಲ ಕಾಲ ಆತಂಕ ಮೂಡಿಸಿತ್ತು. ರಾಯಚೂರಿನ ಲಿಂಗಸೂರಿನಲ್ಲಿ ಏತನೀರಾವರಿ ಯೋಜನೆ ಅಡಿಗಲ್ಲು ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಲಿಕಾಫ್ಟರ್‍ನಲ್ಲಿ ತೆರಳಿದ್ದರು. ತೊಂಡಿಯಾಳ ಹಾಗೂ ಹಾಲಕಾವಟಗಿ ಎರಡೂ ಕಡೆ ಹೆಲಿಪ್ಯಾಡ್‍ಗಳನ್ನು ಮಾಡಲಾಗಿತ್ತು. ತೊಂಡಿಯಾಳದಲ್ಲಿ ನಿಗದಿಯಂತೆ ಹೆಲಿಕಾಫ್ಟರ್ ಲ್ಯಾಂಡ್ ಆಗಬೇಕಾಗಿತ್ತು. ಆದರೆ, ಪೈಲೆಟ್ ಹೆಲಿಕಾಫ್ಟರ್‍ನನ್ನು ಲಿಂಗಸೂರಿನಲ್ಲಿ ಲ್ಯಾಂಡ್ ಮಾಡಿದ ಪರಿಣಾಮ ಕೆಲ ಕಾಲ ಗೊಂದಲ ಉಂಟಾಗಿತ್ತು.

ಹೆಲಿಕಾಪ್ಟರ್ ದಾರಿ ತಪ್ಪಿರುವ ಬಗ್ಗೆ ಸಂಸದ ಡಿ.ವಿ.ನಾಯಕ್ ಮಾಹಿತಿ ನೀಡಿದರು.  ಕೂಡಲೇ ಪೈಲೆಟ್ ಹೆಲಿಕಾಫ್ಟರ್‍ನ್ನು ತೊಂಡಿಯಾಳಕ್ಕೆ ಹೋಯ್ದರು. ಕಾರ್ಯಕ್ರಮಕ್ಕೆ ತೆರಳಲು ಸ್ವಲ್ಪ ತಡವಾಯಿತಾದರೂ ಯಾವುದೇ ಅತಾಚೂರ್ಯ ಸಂಭವಿಸಲಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin