ವೋಟಿಗಾಗಿ ಕಾಂಗ್ರೆಸ್‍ ನಿಂದ ಕೊಲೆ ರಾಜಕಾರಣ : ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ks--eshwarappa

ದಾವಣಗೆರೆ, ಜು.13- ಹಿಂದೂ ಯುವಕರ ಕೊಲೆಗಳಾದರೆ ಮುಸ್ಲಿಂ ಸಮುದಾಯಕ್ಕೆ ತೃಪ್ತಿ ಆಗುತ್ತದೆ. ಇದರಿಂದ ಆ ಸಮುದಾಯದ ವೋಟುಗಳು ಬರುತ್ತವೆ ಎಂಬ ಭ್ರಮೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ಕೊಲೆ ರಾಜಕಾರಣವನ್ನು ಒಪ್ಪುವುದಿಲ್ಲ. ಸಿದ್ದರಾಮಯ್ಯ ಕೇವಲ ಮುಸ್ಲಿಂರಿಗಷ್ಟೇ ಅಲ್ಲ ಇಡೀ ರಾಜ್ಯದ ಜನತೆಗೆ ಮುಖ್ಯಮಂತ್ರಿಯಾಗಿದ್ದಾರೆ ಎಂಬುದನ್ನು ಮನಗಾಣಬೇಕು ಎಂದಅವರು ಸಿದ್ದರಾಮಯ್ಯ ರಾಜ್ಯದ ಕಾಂಗ್ರೆಸ್‍ನ ಕೊನೆ ಸಿಎಂ ಎಂದರು.

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಸಿಎಂ ಸ್ಥಾನದ ಗೌರವ ಕಾಪಾಡಬೇಕು. ಶರತ್‍ಮಡಿವಾಳ ಎಂಬ ಹಿಂದೂ ಯುವಕ ಕೊಲೆಯಾದರೂ ಕೊಲೆಗಡುಕರನ್ನು ಹಿಡಿಯಲು ಸೂಕ್ತ ಕ್ರಮ ಕೈಗೊಂಡಿಲ್ಲ. ಸೌಜನ್ಯಕ್ಕೂ ಶರತ್ ಮನೆಗೂ ಭೇಟಿ ನೀಡಲಿಲ್ಲ ಎಂದು ಕಿಡಿಕಾರಿದರು.  ಶಾಂತಿಗಾಗಿ ಯತ್ನಿಸುವ ಬಿಜೆಪಿ, ಆರ್‍ಎಸ್‍ಎಸ್ ಸಂಘಟನೆಗಳ ಮೇಲೆ ಟೀಕೆ ಮಾಡುವುದನ್ನು ಬಿಟ್ಟು ತಮ್ಮ ಸ್ಥಾನಕ್ಕೆ ಘನತೆ ಬರುವಂತೆ ನಡೆದುಕೊಳ್ಳಲಿ ಎಂದು ತಿರುಗೇಟು ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin