SSLC ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ, 1.23 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣ

Tanveer-ait

ಬೆಂಗಳೂರು, ಜು.13- ಕಳೆದ ಜೂನ್‍ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯಲ್ಲಿ 2.42ಲಕ್ಷ ವಿದ್ಯಾರ್ಥಿಗಳ ಪೈಕಿ 1.23 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಕಳೆದ 7 ವರ್ಷದಲ್ಲಿ ಇದು ದಾಖಲೆಯ ಫಲಿತಾಂಶವಾಗಿದೆ. ಯಥಾರೀತಿ ಪೂರಕ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದವರಿಗಿಂತಲೂ ಗ್ರಾಮೀಣ ಭಾಗದ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.  ವಿಜಯಪುರ ಜಿಲ್ಲೆ ಶೇ.76.23ರಷ್ಟು ಫಲಿತಾಂಶ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಶೇ.29.37ರಷ್ಟು ಫಲಿತಾಂಶ ಪಡೆದಿರುವ ಶಿವಮೊಗ್ಗ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ವಾರ್ಷಿಕ ಪರೀಕ್ಷೆಯಲ್ಲಿ ಪ್ರತೀ ವರ್ಷ ಮೊದಲ ಮತ್ತು ಎರಡನೇ ಸ್ಥಾನ ಪಡೆಯುವ ಕರಾವಳಿ ಜಿಲ್ಲೆಗಳು ಪೂರಕ ಪರೀಕ್ಷೆಯಲ್ಲಿ ನೀರಸ ಸಾಧನೆ ಮಾಡಿವೆ.

ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‍ಸೇಠ್ ಅವರು, ಜೂನ್ 15ರಿಂದ 22ರವರೆಗೆ ರಾಜ್ಯಾದ್ಯಂತ 732 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ನಡೆದಿತ್ತು. 2.42 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಜೂ.29ರಿಂದ ರಾಜ್ಯದ 51 ಮೌಲ್ಯಮಾಪನ ಕೇಂದ್ರಗಳಲ್ಲಿ 49,048 ಮೌಲ್ಯಮಾಪಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ್ದರು. ನಿಗದಿತ ಸಮಯದಲ್ಲಿ ಫಲಿತಾಂಶ ಪ್ರಕಟಿಸಲಾಗಿದ್ದು, ನಾಳೆ 12 ಗಂಟೆ ನಂತರ ಶಾಲೆಗಳಲ್ಲಿ ಫಲಿತಾಂಶ ಲಭ್ಯವಿದೆ ಎಂದರು.  ಪರೀಕ್ಷೆಗೆ ಹಾಜರಾದ ಸರ್ಕಾರಿ ಶಾಲೆಯ 1,04,715 ವಿದ್ಯಾರ್ಥಿಗಳಲ್ಲಿ 53,192 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.50.08ರಷ್ಟು ಫಲಿತಾಂಶ ಬಂದಿದೆ. ಅನುದಾನಿತ 3285 ಶಾಲೆಗಳಿಂದ 81,147ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 42,217 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.52.03ರಷ್ಟು ಫಲಿತಾಂಶ ಬಂದಿದೆ.

ಅನುದಾನ ರಹಿತ 5710 ಶಾಲೆಗಳಿಂದ 57.087 ವಿದ್ಯಾರ್ಥಿಗಳು ಪರೀಕ್ಷೆ ಬರೆದು 28,034 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ. ಶೇ.49.11ರಷ್ಟು ಫಲಿತಾಂಶ ಬಂದಿದೆ. ಒಟ್ಟಾರೆ 1,23,443ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.50.81ರಷ್ಟು ಫಲಿತಾಂಶ ಬಂದಿದೆ ಎಂದು ವಿವರಿಸಿದರು.

ಜಿಲ್ಲಾವಾರು ಫಲಿತಾಂಶ :

ಬಾಗಲಕೋಟೆ ಶೇ.42.44
ಬಳ್ಳಾರಿ ಶೇ.51.33
ಬೆಳಗಾವಿ ಶೇ.73.19,
ಬೆಂಗಳೂರು ಉತ್ತರ ಶೇ.35.76,
ಬೆಂಗಳೂರು ಗ್ರಾಮಾಂತರ ಶೇ.54.02,
ಬೆಂಗಳೂರು ದಕ್ಷಿಣ ಶೇ.27.61,
ಬೀದರ್ ಶೇ.52.10,
ಚಾಮರಾಜನಗರ ಶೇ.49.89,
ಚಿಕ್ಕಬಳ್ಳಾಪುರ ಶೇ.34.15,
ಚಿಕ್ಕಮಗಳೂರು ಶೇ.34.11,
ಚಿಕ್ಕೋಡಿ ಶೇ.74.68,
ಚಿತ್ರದುರ್ಗ ಶೇ.54.61,
ದಾವಣಗೆರೆ ಶೇ.51.88,
ಧಾರವಾಡ ಶೇ.73.64,
ಗದಗ ಶೇ.66.74,
ಹಾಸನ ಶೇ.42.76,
ಹಾವೇರಿ ಶೇ.52,
ಕಲಬುರಗಿ ಶೇ.52.87,
ಕೊಡಗು ಶೇ.58.94,
ಕೋಲಾರ ಶೇ.54.85,
ಕೊಪ್ಪಳ ಶೇ.64.43,
ಮಧುಗಿರಿ ಶೇ.26.85,
ಮಂಡ್ಯ ಶೇ.74.49,
ಮಂಗಳೂರು ಶೇ.30.10,
ಮೈಸೂರು ಶೇ.43.31,
ರಾಯಚೂರು ಶೇ.64.81,
ರಾಮನಗರ ಶೇ.65.76,
ಶಿವಮೊಗ್ಗ ಶೇ.29.37,
ಶಿರಸಿ ಶೇ.35.29,
ತುಮಕೂರು ಶೇ.46.03,
ಉಡುಪಿ ಶೇ.35.28,
ಉತ್ತರ ಕನ್ನಡ ಶೇ.61.40,
ವಿಜಯಪುರ ಶೇ.76.23,
ಯಾದಗಿರಿ ಶೇ.60.55

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin