ಅಕ್ರಮ ಗಣಿಗಾರಿಕೆ ಬಗ್ಗೆ ಕೈಗೊಂಡ ಕ್ರಮವೇನು..? : ಶ್ವೇತಪತ್ರಕ್ಕೆ ಶೆಟ್ಟರ್ ಒತ್ತಾಯ

Jagadish-Shettar-01

ಬೆಂಗಳೂರು, ಜು.14- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ರಮ ಗಣಿಗಾರಿಕೆ ಕುರಿತು ಏನು ಕ್ರಮ ಕೈಗೊಂಡಿದ್ದಾರೆ ಎಂಬ ಕುರಿತು ಶ್ವೇತಪತ್ರ ಹೊರಡಿಸುವಂತೆ ವಿರೋಧಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ವರ್ಷ ಅಧಿಕಾರ ಮುಗಿಸಿ ಕೊನೆಯ ವರ್ಷದಲ್ಲಿದ್ದೀರಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗಟ್ಟುವುದಾಗಿ ಹೇಳಿದ್ದರು. ಈವರೆಗೂ ಎಷ್ಟು ಮಂದಿಯನ್ನು ಜೈಲಿಗೆ ಕಳುಹಿಸಿದ್ದೀರಿ ಎಂದು ಅವರು ಪ್ರಶ್ನಿಸಿದರು.

ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿ ಅಕ್ರಮ ಗಣಿಗಾರಿಕೆ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡಿದ್ದೀರಿ. ನಾಲ್ಕುವರ್ಷಗಳ ಅವಧಿಯಲ್ಲಿ ಲೋಕಾಯುಕ್ತ ವರದಿ ಶಿಫಾರಸಿನಿಂದ ಒಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಅಕ್ರಮ ಗಣಿಗಾರಿಕೆ ನಡೆಸಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ನಿಷ್ಠೆ ಇಲ್ಲ ಎಂದು ದೂರಿದರು. ಈಗಾಗಲೇ ವಿಚಾರಣೆ ಹಂತದಲ್ಲಿರುವ ಪ್ರಕರಣಗಳನ್ನು ಪುನಃ ಎಸ್‍ಐಟಿ ತನಿಖೆಗೆ ಆದೇಶಿಸಿರುವುದು ಕೇವಲ ವಿರೋಧ ಪಕ್ಷಗಳನ್ನು ಚದುರಿಸುವ ಗುರಿಯಾಗಿದೆ. ಸ್ವತಃ ಲೋಕಾಯುಕ್ತ ಸಂಸ್ಥೆಯಲ್ಲಿರುವ ನಿಮ್ಮ ಮೇಲೆ ದೂರುಗಳು ದಾಖಲಾಗಿದ್ದರೂ ವಿಚಾರಣೆ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲಾ ತನಿಖಾ ಸಂಸ್ಥೆಗಳು ಸರ್ಕಾರದ ಅಧೀನದಲ್ಲಿವೆ. ಇದರಿಂದ ನಿಷ್ಪಕ್ಷಪಾತ ತಮಿಖೆ ನಡೆಸಲು ಸಾಧ್ಯವಿಲ್ಲ. ವಿರೋಧ ಪಕ್ಷಗಳಿಗೆ ಗುನ್ನ ತೋರಿಸುವ ತಂತ್ರ ಅಡಗಿದೆ ಎಂದು ಶೆಟ್ಟರ್ ಆಪಾದಿಸಿದರು.

ಕೆಂಪಯ್ಯ ವಿರುದ್ಧ ಅಸಮಾಧಾನ:

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೇ ಪರಸ್ಪರ ಕಚ್ಚಾಡುತ್ತಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಮೇಲೆ ಜೈಲು ಪಾಲಾಗಿರುವ ಶಶಿಕಲಾ ಹಾಗೂ ನಕಲಿ ಛಾಪಾಕಾಗದ ಹಗರಣ ರೂವಾರಿ ಕಲಿಂಲಾಲ್ ಅವರಿಗೆ ಸವಲತ್ತುಗಳನ್ನು ನೀಡಲು ಎರಡು ಕೋಟಿ ನೀಡಲಾಗಿದೆ ಎಂದು ಹಿರಿಯ ಅಧಿಕಾರಿ ಮೇಲೆಯೇ ಕೆಳಹಂತದ ಅಧಿಕಾರಿ ದೂರಿದ್ದಾರೆ. ಗೃಹ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬುದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.  ಗೃಹ ಇಲಾಖೆಯಲ್ಲಿ ಕೆಂಪಯ್ಯ ಸಲಹೆ ಮಾಡುವುದರಿಂದಲೇ ಇಂದು ಅಧಿಕಾರಿಗಳೊಂದಿಗೆ ಹೊಂದಾಣಿಕೆ ಸಾಧಿಸಲು ಸಾಧ್ಯವಾಗುತ್ತಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOSb

Facebook Comments

Sri Raghav

Admin