ಆ.21ರ ಸೂರ್ಯಗ್ರಹಣದಿಂದ ಕಗ್ಗತ್ತಲಲ್ಲಿ ಮುಳುಗಲಿವೆ 70 ಲಕ್ಷ ಮನೆಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Solar-Eclipse

ವಾಷಿಂಗ್ಟನ್, ಜು.14-ಮುಂದಿನ ತಿಂಗಳು 21ರಂದು ಸಂಭವಿಸಲಿರುವ ಸೂರ್ಯಗ್ರಹಣದಿಂದ ಅಮೆರಿಕದಲ್ಲಿ 70 ಲಕ್ಷ ಮನೆಗಳ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. 9,000 ಮೆಗಾ ವ್ಯಾಟ್‍ಗಳಷ್ಟು ವಿದ್ಯುತ್ ಉತ್ಪಾದನೆಗೆ ಸಂಚಕಾರವಾಗಲಿದ್ದು, ಇದು ಒಂಭತ್ತು ನ್ಯೂಕ್ಲಿಯರ್ ರಿಯಾಕ್ಟರ್‍ಗಳಿಗೆ (ಅಣು ಸ್ಥಾವರ) ಸಮ ಎಂದು ಅಂದಾಜು ಮಾಡಲಾಗಿದೆ.   ಅಗಸ್ಟ್ 21ರ ಸೂರ್ಯ ಗ್ರಹಣವು ಅಮೆರಿಕದ ಓರೆಗಾನ್‍ನಿಂದ ಸೌತ್ ಕರೋಲಿನಾವರೆಗೆ 113 ಕಿ.ಮೀ. ಮಾರ್ಗದುದ್ದಕ್ಕೂ ತನ್ನ ಕರಾಳ ಪರಿಣಾಮ ಬೀರುವ ಸಾಧ್ಯತೆ ಇದೆ. ನಿರ್ದಿಷ್ಟವಾಗಿ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆಗೆ ಸಂಚಕಾರವಾಗಲಿದೆ ಎಂದು ತಜ್ಞರು ಮುನ್ಸೂಚನೆ ನೀಡಿದ್ದಾರೆ.

ಈ ಎರಡೂ ರಾಜ್ಯಗಳಲ್ಲಿ ಗ್ರಹಣದಿಂದಾಗಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡಲಿದ್ದು, ಏಳು ದಶಲಕ್ಷ ಮನೆಗಳು ಕಗ್ಗತ್ತಲಲ್ಲಿ ಮುಳುಗುವ ಸಾಧ್ಯತೆ ದಟ್ಟವಾಗಿದೆ. ಬೃಹತ್ ಸೌರ ಘಟಕಗಳು ಮತ್ತು ಮನೆಗಳ ಮೇಲೆ ಅಳವಡಿಸಲಾದ ಸಾವಿರಾರು ಸೌರ ಕೋಶ ಹಲಗೆಗಳ ಮೇಲೂ ದುಷ್ಪರಿಣಾಮ ಆಗಲಿದೆ ಎಂದು ಊಹಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin