ಕಾಶ್ಮೀರ ಬಿಕ್ಕಟ್ಟು : ಇಂಡೋ-ಪಾಕ್ ಚರ್ಚೆಗೆ ವಿಶ್ವಸಂಸ್ಥೆ ಒಲವು

ಈ ಸುದ್ದಿಯನ್ನು ಶೇರ್ ಮಾಡಿ

India---Pakistan---UN

ವಿಶ್ವಸಂಸ್ಥೆ, ಜು.14-ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮಾತುಕತೆ ಮೂಲಕ ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೊ ಗುಟ್ರೆಸ್ ಪುನರುಚ್ಚರಿಸಿದ್ದಾರೆ. ಉಭಯ ದೇಶಗಳು ಪೂರಕ ವಾತಾವರಣದಲ್ಲಿ ಪರಸ್ಪರ ಸೌಹಾರ್ದಯುತ ಸಮಾಲೋಚನೆ ಮೂಲಕ ಬಗೆಹರಿಸಿಕೊಳ್ಳಬೇಕು. ಅಗತ್ಯವಿದ್ದರೆ ಈ ವಿಷಯದಲ್ಲಿ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಲು ಸಿದ್ದ ಎಂದು ಮಹಾ ಪ್ರಧಾನ ಕಾರ್ಯದರ್ಶಿಯವರು ತಿಳಿಸಿರುವುದಾಗಿ ಅವರ ವಕ್ತಾರ ಸ್ಟೀಫನ್ ಡುಜರೆಕ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಂಟೋನಿಯೊ ಗುಟ್ರೆಸ್ ಅವರು ಈ ಹಿಂದೆಯೂ ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಇದೇ ಸಲಹೆ ನೀಡಿದ್ದರು. ಇಂಡೋ-ಪಾಕ್ ಸಂಬಂಧ ಮತ್ತಷ್ಟು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಅವರು ಮತ್ತೊಮ್ಮೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವಕ್ತಾರರು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin