ಕುಖ್ಯಾತ ಲಷ್ಕರ್ ಉಗ್ರ ಶಹಬಾಜ್ ಮೀರ್‍’ನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Terrorist--Arrested--01

ಶ್ರೀನಗರ, ಜು.14-ಪಾಕಿಸ್ತಾನ ಕೃಪಾಪೋಷಿತ ಭಯೋತ್ಪಾದಕರ ದಮನ ಮತ್ತು ಬಂಧನ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಭದ್ರತಾ ಪಡೆಗಳು ನಿಷೇಧಿತ ಲಷ್ಕರ್-ಇ-ತೈಬಾ ಸಂಘಟನೆಯ ಮತ್ತೊಬ್ಬ ಕುಖ್ಯಾತ ಉಗ್ರಗಾಮಿ ಶಹಬಾಜ್ ಮೀರ್‍ನನ್ನು ಕಾಶ್ಮೀರದಲ್ಲಿ ಬಂಧಿಸಿವೆ. ಈತನ ಸೆರೆಯೊಂದಿಗೆ ಕಣವೆ ರಾಜ್ಯದಲ್ಲಿ ಸಂಭವಿಸಬಹುದಾಗಿದ್ದ ಮತ್ತೊಂದು ವಿಧ್ವಂಸಕ ದಾಳಿ ತಪ್ಪಿದಂತಾಗಿದೆ.  ಬಂಡಿಪೋರಾದ ಸಂಬಾಲ್‍ನಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಯೋಧರು ಶಹಬಾಜ್‍ನನ್ನು ಸೆರೆ ಹಿಡಿದು 1 ಪಿಸ್ತೂಲ್, 4 ಗ್ರೆನೇಡ್‍ಗಳೂ ಸೇರಿದಂತೆ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಏಳು ಅಮರನಾಥ ಯಾತ್ರಿಕರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ನಾಲ್ವರು ಲಷ್ಕರ್ ಉಗ್ರರನ್ನು ಬಂಧಿಸಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin