ಜಲಾಲ್‍ಖೇಡನಲ್ಲಿ ಗೋರಕ್ಷಕರಿಂದ ಭೀಕರ ಹಲ್ಲೆಗೆ ಒಳಗಾಗಿದ್ದು ಮುಸ್ಲಿಂ ಬಿಜೆಪಿ ನಾಯಕ..!

ಈ ಸುದ್ದಿಯನ್ನು ಶೇರ್ ಮಾಡಿ

Muslim-Man

ಮುಂಬೈ, ಜು.14-ದನದ ಮಾಂಸ ಸಾಗಿಸುತ್ತಿದ್ದರು ಎಂಬ ಶಂಕೆಯಿಂದ ಸ್ವಯಂಘೋಷಿತ ಗೋರಕ್ಷಕರಿಂದ ಬುಧವಾರ ಸಂಜೆ ಮಹಾರಾಷ್ಟ್ರದ ಜಲಾಲ್‍ಖೇಡ ಎಂಬಲ್ಲಿ ತೀವ್ರ ಹಲ್ಲೆಗೆ ಒಳಗಾದ ಮುಸ್ಲಿಂ ವ್ಯಕ್ತಿಯು ಬಿಜೆಪಿ ಮುಖಂಡ ಎಂಬುದು ಇದೀಗ ಬಹಿರಂಗಗೊಂಡಿದೆ.  ತೀವ್ರ ಹಲ್ಲೆಗೆ ಒಳಗಾದ ಕಟೋಲ್ ನಿವಾಸಿ ಸಲೀಂ ಇಸ್ಮಾಯಿಲ್ ಶಾ (36) ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೆ ಸಂಬಂಧಪಟ್ಟಂತೆ ನಾಗ್ಪುರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಗೋರಕ್ಷಕರು ಎಂದು ಹೇಳಿಕೊಂಡು ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿರುವಾಗಲೇ ಇಸ್ಲಾಯಿಲ್ ಮೇಲೆ ಈ ಆಕ್ರಮಣ ನಡೆದಿದೆ.

ಇಸ್ಮಾಯಿಲ್ ಶಾ ಬಿಜೆಪಿ ಕಟೋಲ್ ತಾಲೂಕು ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಮತ್ತು ಸಕ್ರಿಯ ಮುಖಂಡರು. ಅಮರಾವತಿ ಜಿಲ್ಲೆಯ ಅಮ್ನೋರ್ ಎಂಬ ಗ್ರಾಮದಿಂದ ಸಮಾರಂಭಕ್ಕಾಗಿ ಮಾಂಸ ಖರೀದಿಸಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಅವರ ಮೇಲೆ ಗೋರಕ್ಷಕರು ಹಲ್ಲೆ ನಡೆಸಿದ್ದರು. ತಮ್ಮಲ್ಲಿರುವುದು ಕುರಿ ಮಾಂಸವೇ ಹೊರತು ಬೀಫ್ ಅಲ್ಲ ಎಂದು ಸ್ಪಷ್ಟಪಡಿಸಿದ್ದರೂ ಅವರನ್ನು ತೀವ್ರವಾಗಿ ಥಳಿಸಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin