ನಿಮ್ ಶೇಪ್ ಸಕತ್ತಾಗಿದೆ..! : ಫ್ರಾನ್ಸ್ ಅಧ್ಯಕ್ಷರ ಪತ್ನಿಯ ಸೌಂದರ್ಯ ಬಣ್ಣಿಸಿದ ರಸಿಕ ಟ್ರಂಪ್..!

Trump--01

ಪ್ಯಾರಿಸ್,ಜು.14- ಫ್ರಾನ್ಸ್ ಅಧ್ಯಕ್ಷ ಮಾರ್ಕನ್ ಪತ್ನಿ ಬ್ರಿಗಿಟ್ಟೆ ಅವರ ದೇಹ ಶೇಪ್ ತುಂಬಾ ಚೆನ್ನಾಗಿದೆ ಎಂದು ಹೊಗಳುವ ಮೂಲಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರೀ ಟೀಕೆಗೆ ಒಳಗಾಗಿದ್ದಾರೆ.  ಫ್ರಾನ್ಸ್ ಪ್ರವಾಸದಲ್ಲಿರುವ ಡೊನಾಲ್ಡ್ ಟ್ರಂಪ್ ಅವರನ್ನು ಪ್ಯಾರಿಸ್‍ನಲ್ಲಿ ಫ್ರಾನ್ಸ್ ಅಧ್ಯಕ್ಷ ಮಾರ್ಕನ್ ದಂಪತಿ ಹಸ್ತಲಾಘವ ಮಾಡುವ ಮೂಲಕ ಅದ್ದೂರಿ ಸ್ವಾಗತ ಕೋರಿದ್ದರು. ಈ ವೇಳೆ ಟ್ರಂಪ್ ಹಾಗೂ ಫ್ರಾನ್ಸ್ ಅಧ್ಯಕ್ಷ ಮಾರ್ಕನ್ ಪತ್ನಿ ಬ್ರಿಗಿಟ್ಟೆ ಇಬ್ಬರೂ ಕೈ ಕುಲಕಿದ್ದರು.

ಈ ಸಮಯದಲ್ಲಿ ಟ್ರಂಪ್ ನೀವು ನಿಜವಾಗಲೂ ಒಳ್ಳೆಯ ಶೇಪ್‍ನಲ್ಲಿದ್ದೀರಿ. ಗುಡ್ ಫಿಸಿಕಲ್ ಶೇಪ್, ಬ್ಯೂಟಿಫುಲ್ ಅಂತಾ ಬ್ರಿಗಿಟ್ಟೆ ಅವರ ಸೌಂದರ್ಯದ ಬಗ್ಗೆ ಕಮೆಂಟ್ ಕೊಟ್ಟಿದ್ದಾರೆ.   ಡೊನಾಲ್ಡ್ ಟ್ರಂಪ್ ಅವರ ಈ ಹೇಳಿಕೆ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಹಿಲರಿ ಕ್ಲಿಂಟನ್, ಕಾರ್ಲಿ ಫಿಯೊರಿನಾ ಮುಂತಾದವರು ಟ್ರಂಪ್ ಹೇಳಿಕೆಯನ್ನು ಖಂಡಿಸಿದ್ದಾರೆ.   ಇನ್ನು, ಕಳೆದ ವರ್ಷ ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಪ್ರಚಾರ ಸಂದರ್ಭದಲ್ಲೂ ಟ್ರಂಪ್ ಇಂಹತದ್ದೇ ಹೇಳಿಕೆಯನ್ನು ಕೊಟ್ಟು ಟೀಕೆಗೆ ಗುರಿಯಾಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin