ಪಾಕ್‍ಗೆ ಪರಾರಿಯಾಗಲು ಯತ್ನಿಸಿದ ಆಫ್ಘನ್ ಪ್ರಜೆ ಬಂಧನ

Afghan-national

ಶ್ರೀನಗರ, ಜು.14-ಭಾರತದಿಂದ ಆಫ್ಘಾನಿಸ್ತಾನಕ್ಕೆ ಹಸ್ತಾಂತರಗೊಳ್ಳಬೇಕಾಗಿದ್ದ ಪ್ರಜೆಯೊಬ್ಬ ಪಾಕಿಸ್ತಾನಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಸ್‍ಒಸಿ) ಬಳಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬಾರಾಮುಲ್ಲಾದ ಕ್ರಾಲಹಾರ್‍ನಲ್ಲಿ ನಿನ್ನೆ ಮಹಮದ್ ದಾವೂದ್(27) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಖುಲಾಸೆಯಾಗಿರುವ ದಾವೂದ್ ಆಫ್ಘಾನಿಸ್ತಾನಕ್ಕೆ ಹಸ್ತಾಂತರಗೊಳ್ಳಬೇಕಿತ್ತು. ಆಧರೆ ಆತನ ಖುಲಾಸೆ ವಿರುದ್ಧ ಸರ್ಕಾರ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.

ಈತನ ಪಾಸ್‍ಪೋರ್ಟ್ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಘಟಕದಲ್ಲಿದೆ. ದೆಹಲಿಯ ನರೇಲಾ ಪ್ರದೇಶದ ಲಂಪೂರ್‍ನಲ್ಲಿ ಆತನ ಚಲನವಲನಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ.  ಖುಲಾಸೆಗೊಂಡಿರುವ ಈತ ಎಲ್‍ಒಸಿ ದಾಟುವ ಮೂಲಕ ಪಾಕಿಸ್ತಾನ ಮಾರ್ಗವಾಗಿ ಅಫ್ಘಾನಿಸ್ತಾನಕ್ಕೆ ಹಿಂದಿರುಗಲು ಯತ್ನಿಸುತ್ತಿದ್ದ. ಉರಿ ಪಟ್ಟಣದ ಗಡಿ ಬಳಿ ಈತ ತೆರಳುತ್ತಿದ್ದ ವಾಹನವನ್ನು ಪೊಲೀಸರು ಅಡ್ಡಗಟ್ಟಿ ಆತನೊಂದಿಗೆ ಇದ್ದ ಇನ್ನಿಬ್ಬರನ್ನು ಬಂಧಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin