ಬ್ಯಾಂಕ್‍ಗಳಲ್ಲೂ ಆಧಾರ್ ನೋಂದಣಿ ಸೌಲಭ್ಯ

ಈ ಸುದ್ದಿಯನ್ನು ಶೇರ್ ಮಾಡಿ

Adhar-Registration

ನವದೆಹಲಿ, ಜು.14-ಮುಂದಿನ ವಾರದಿಂದ ಬ್ಯಾಂಕ್‍ಗಳ 10 ಶಾಖೆಗಳಲ್ಲಿ ಒಂದು ಬ್ರಾಂಚ್‍ನಲ್ಲಿ ಆಧಾರ್ ನೋಂದಣಿ ಸೌಲಭ್ಯ ಕಲ್ಪಿಸುವಂತೆ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‍ಗಳಲ್ಲಿ ಭಾರತ ವಿಶಿಷ್ಟ ಗುರುತು ಪ್ರಾಧಿಕಾರ (ಯೂನಿಕ್ ಐಡೆಂಟಿಫಿಕೇಷನ್ ಆಥಾರಿಟಿ ಆಫ್ ಇಂಡಿಯಾ-ಯುಐಡಿಎಐ) ಕೋರಿದೆ.  ಪ್ರಸ್ತುತ ದೇಶವ್ಯಾಪಿ 25,000 ಆಧಾರ್ ದಾಖಲಾತಿ ಕೇಂದ್ರಗಳಿವೆ. ಆದರೆ, ಇವೆಲ್ಲವೂ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಯಾವುದೇ ಕೇಂದ್ ಬ್ಯಾಂಕ್ ಆವರಣದಲ್ಲಿ ಇಲ್ಲ.  ಆಧಾರ್ ಕಾರ್ಡ್‍ಗಳನ್ನು ಪಡೆಯಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಯುಐಡಿಎಐ ಈಗ ಬ್ಯಾಂಕ್‍ಗಳಲ್ಲೂ ಆಧಾರ್ ನೋಂದಣಿ ಸೌಲಭ್ಯ ಕೇಂದ್ರಗಳನ್ನು ಕಲ್ಪಿಸುವಂತೆ ಮನವಿ ಮಾಡಿದೆ.

ಆಗಸ್ಟ್ ಅಂತ್ಯದ ಒಳಗೆ ಹತ್ತು ಶಾಖೆಗಳಲ್ಲಿ ಒಂದರಲ್ಲಿ ಆಧಾರ್ ನೋಂದಣಿ ಮತ್ತು ಪರಿಷ್ಕರಣೆ ಸೌಲಭ್ಯ ಕಲ್ಪಿಸಲು ನಾವು ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ ಮನವಿ ಮಾಡಿದ್ದೇವೆ ಎಂದು ಪ್ರಾಧಿಕಾರದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.   ಭಾರತದಲ್ಲಿ 1.20 ಲಕ್ಷ ಬ್ಯಾಂಕ್ ಶಾಖೆಗಳಿವೆ. ಇದರಿಂದಾಗಿ 12 ಸಾವಿರ ಶಾಖೆಗಳಲ್ಲಿ ಆಧಾರ್ ನೋಂದಣಿ ಮತ್ತು ಪರಿಷ್ಕರಣೆ ಕೇಂದ್ರಗಳನ್ನು ಆರಂಭಿಸಬಹುದಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin