ಮಲೆನಾಡ ಮಿತ್ರ ಮತ್ತು ಸಾಧಕರ ಪ್ರಶಸ್ತಿ ಪ್ರಕಟ

Malenadu--01

ಬೆಂಗಳೂರು, ಜು.14- ಪ್ರಸಕ್ತ ಸಾಲಿನ ಮಲೆನಾಡ ಮಿತ್ರ ಮತ್ತು ಮಲೆನಾಡ ಸಾಧಕರ ಪ್ರಶಸ್ತಿ ಘೋಷಣೆಯಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಮಲೆನಾಡು ಮಿತ್ರವೃಂದದಿಂದ ಮಲೆನಾಡ ಮಿತ್ರ ಮತ್ತು ಸಾಧಕರ ಪ್ರಶಸ್ತಿ ಪ್ರಕಟ ಮಾಡಲಾಗಿದೆ ಎಂದು ಮಿತ್ರವೃಂದದ ಅಧ್ಯಕ್ಷ ಅನಿಲ್ ಹೊಸಕೊಪ್ಪ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಷ್ಟ್ರಪ್ರಶಸ್ತಿಗೆ ಭಾಜನವಾಗಿರುವ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಗ್ರಾಮ ಪಂಚಾಯ್ತಿಗೆ ಮಲೆನಾಡ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಉಳಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ನಾಲ್ವರಿಗೆ ಮಲೆನಾಡ ಸಾಧಕ ಪ್ರಶಸ್ತಿ ನೀಡಿಗ ಗೌರವಿಸಲಾಗುತ್ತಿದೆ.

ಕೃಷಿ ಕ್ಷೇತ್ರದಿಂದ ತೀರ್ಥಹಳ್ಳಿಯ ಕೃಷ್ಣಕುಮಾರ್, ಹಳಿಮಠ. ಉದ್ಯಮ ಕ್ಷೇತ್ರದಿಂದ ಶೃಂಗೇರಿಯ ವಿಕಾಸ್ ಬೇಗಾನೆ , ಜಾನಪದ ಕ್ಷೇತ್ರದಿಂದ ಬಾಳೆಹೊನ್ನೂರಿನ ಎಸ್.ಎಸ್.ವೆಂಕಟೇಶ್ ಸಿಗಾಸೆ ಮತ್ತು ಶಿಕ್ಷಣ ಕ್ಷೇತ್ರದಿಂದ ಶೃಂಗೇರಿ ತಾಲೂಕಿನ ಕುತುಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಾಧಕರ ಪ್ರಶಸ್ತಿಗೆ ಪಾತ್ರವಾಗಿದೆ.
ಮಲೆನಾಡು ಮಿತ್ರವೃಂದ ದಶಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಆಗಸ್ಟ್ 20 ರಂದು ಆನಂದ್‍ರಾವ್ ವೃತ್ತದಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕøತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin