ನಿಯಮ ಉಲ್ಲಂಘಿಸಿರುವ ಕಾರಾಗೃಹದ ಅಧಿಕಾರಿಗಳನ್ನು ರಜೆ ಮೇಲೆ ಮನೆಗೆ ಕಳುಹಿಸಿ : ಹೆಚ್ಡಿಕೆ

Kumaraswamy--01

ಬೆಂಗಳೂರು, ಜು.14- ಸೇವಾ ನಿಯಮ ಉಲ್ಲಂಘಿಸಿರುವ ಕಾರಾಗೃಹದ ಅಧಿಕಾರಿಗಳನ್ನು ರಜೆ ಮೇಲೆ ಮನೆಗೆ ಕಳುಹಿಸಿ ಪ್ರಾಮಾಣಿಕ ತನಿಖೆ ನಡೆಸಿ ಸತ್ಯ ಹೊರ ತನ್ನಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿರುವ ಈ ಪ್ರಕರಣ ಸಂಬಂಧ ಈ ಇಬ್ಬರು ಅಧಿಕಾರಿಗಳಾದ ಡಿಐಜಿ ರೂಪಾ ಹಾಗೂ ಡಿಜಿಪಿ ಸತ್ಯನಾರಾಯಣ್ ರಾವ್ ಅವರನ್ನು ನಿನ್ನೆಯೇ ರಜೆ ಮೇಲೆ ಕಳುಹಿಸಬೇಕಿತ್ತು ಎಂದರು.

ನಿವೃತ್ತ ಮುಖ್ಯ ಕಾರ್ಯದರ್ಶಿಯಿಂದ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಎಸಿಬಿಯಿಂದ ಈ ತನಿಖೆ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ ಅವರು, ಯಾವುದೇ ರೀತಿ ತನಿಖೆ ನಡೆಸಿದರೂ ಸತ್ಯಾಂಶ ಹೊರಬರಬೇಕಿದೆ. ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿದಂತೆ ಇದನ್ನೂ ಮಾಡಬೇಡಿ. ಒಂದಂಕಿ ಲಾಟರಿ, ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳು ಹೋದ ಹಾದಿಯಲ್ಲೇ ತನಿಖೆಯೂ ಹೋಗುವುದು ಬೇಡ. ಪ್ರಾಮಾಣಿಕವಾಗಿ ನಡೆಯಲಿ ಎಂದು ಒತ್ತಾಯಿಸಿದರು.

ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯದಿಂದ ಈ ಪರಿಸ್ಥಿತಿ ಉದ್ಭವಿಸಿದೆ. ಹಿರಿಯ ಅಧಿಕಾರಿಗಳು ಹಣ ಸಂಗ್ರಹ ಮಾಡುತ್ತಿರುವುದು ಇದೇನು ಹೊಸತಲ್ಲ. 75 ಲಕ್ಷದಿಂದ ಇದೀಗ 1 ಕೋಟಿ ತಲುಪಿದೆ ಎಂಬ ಆರೋಪಗಳು ಇವೆ. ಶಶಿಕಲಾಗೆ ವಿಶೇಷ ಆತಿಥ್ಯ ನೀಡುವ ಸಂಬಂಧ ಲಂಚ ಸ್ವೀಕರಿಸಿರುವುದಲ್ಲದೆ, ಮಾಸಿಕ 10 ಲಕ್ಷ ನಿಗದಿಯಾಗಿತ್ತು ಎಂಬ ವಿಚಾರಗಳೂ ಕೇಳಿ ಬಂದಿವೆ. ಇಂತಹ ಗಂಭೀರ ಆರೋಪಗಳ ಬಗ್ಗೆಯೂ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳಿಗಿಂತ ಈ ಇಬ್ಬರು ಅಧಿಕಾರಿಗಳು ದೊಡ್ಡವರೇನಲ್ಲ. ಸಾಮಾಜಿಕ ಸೇವೆಯಲ್ಲಿರುವ ಇಂಥವರ ವಿರುದ್ಧ ಬಂದಿರುವ ಆರೋಪಗಳ ಮೇಲಿನ ಸತ್ಯಾಂಶ ತನಿಖೆಯಿಂದ ಹೊರಬರಲಿ. ಜಾತಿ, ದುಡ್ಡಿನ ಮೇಲೆ ಹುದ್ದೆ ನೀಡಲು ಆರಂಭಿಸಿದಾಗಲೇ ಪರಿಸ್ಥಿತಿ ಹದಗೆಟ್ಟಿತ್ತು. ಯಾವ ಸೀಮೆಯ ಆಡಳಿತ ಇವರು ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.
ಜನ ಇವರ ದುರಂಹಕಾರದ ಮಾತುಗಳನ್ನು ಜನ ಗಮನಿಸಿದ್ದಾರೆ. ಈ ಹಿಂದೆ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಆಡಳಿತ ಹೆಸರು ಮಾಡಿತ್ತು. ಆದರೆ ಇಂತಹ ವಿಚಾರಗಳಿಗೆ ಹೆಸರುವಾಸಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಲೆಕೇರಿ ಅದಿರು ಪ್ರಕರಣ ಏನಾಯಿತು, ಇಂತಹ ಹಲವಾರು ಪ್ರಕರಣಗಳ ಪರಿಸ್ಥಿತಿ ಏನಾಗಿದೆ, ಅದೇ ರೀತಿ ಈ ಪ್ರಕರಣವೂ ಆಗಬಾರದು. ನಿಷ್ಪಕ್ಷಪಾತವಾದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin