ಯಾವ ಪುರುಷಾರ್ಥಕ್ಕೆ ನಿಮ್ಮ ಜತೆ ಚರ್ಚೆಗೆ ಬರಬೇಕು..? : ಸಿಎಂಗೆ ಬಿಎಸ್‍ವೈ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-vs-Siddaramaiah

ಬೆಂಗಳೂರು, ಜು.14- ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದ ಮದದಿಂದ ಮೂರ್ಖರಂತೆ ಮಾತನಾಡದೆ, ಉಳಿದಿರುವ ದಿನಗಳಲ್ಲಾದರೂ ಜನಪರ ಕೆಲಸ ಮಾಡದಿದ್ದರೆ ಕಾಂಗ್ರೆಸ್ ರಾಜ್ಯದಲ್ಲಿ ನಿರ್ನಾಮವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ. ತಾವು ಮಾಡಿರುವ ಅಭಿವೃದ್ಧಿ ಕುರಿತಂತೆ ಬಹಿರಂಗ ಚರ್ಚೆಗೆ ಬರಬೇಕೆಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ನಿಮ್ಮ ಜತೆ ಚರ್ಚೆ ಮಾಡಲಿ ಎಂದು ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಇದೆ ಎಂಬ ಅಮಲಿನಲ್ಲಿ ಬಾಯಿಗೆ ಬಂದಂತೆ ಮಾತನಾಡಬೇಡಿ. ಕಾಂಗ್ರೆಸ್ ಅಧಿಕಾರದಲ್ಲಿರುವುದು ಇನ್ನು 8, 9 ತಿಂಗಳು ಮಾತ್ರ. ನಂತರ ಎಲ್ಲಿರುತ್ತದೋ ಎಂಬುದು ಸ್ವತಃ ನಿಮಗೇ ಗೊತ್ತಿರುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ದೇಶದ ಯಾವ ಮುಖ್ಯಮಂತ್ರಿಗಳೂ ಸಹ ಪ್ರಧಾನಿಯವರನ್ನು ಚರ್ಚೆಗೆ ಬನ್ನಿ ಎಂದು ಕರೆದಿಲ್ಲ. ಆದರೆ, ಸಿದ್ದರಾಮಯ್ಯನವರು ತಮಗೆ ಅಧಿಕಾರ ಇದ್ದು ಏನು ಬೇಕಾದರು ಮಾತನಾಡಬಹುದು ಎಂಬ ಹುಂಬತನದಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇವರ ಈ ಒಣ ಜಂಭಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸತತ ಬರಗಾಲವಿದೆ. ಒಂದಡೆ ರೈತ ನಿರಂತರವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಇಲ್ಲ. ಮತ್ತೊಂದೆಡೆ ಉದ್ಯೋಗ ಸಿಗದೆ ಜನರು ಗುಳೆ ಹೋಗುತ್ತಿದ್ದಾರೆ.

ಇದರ ಬಗ್ಗೆ ಗಮನ ಕೊಡಬೇಕಾದ ಮುಖ್ಯಮಂತ್ರಿ ನಮ್ಮನ್ನು ಅಭಿವೃದ್ಧಿಗೆ ಕುರಿತಂತೆ ಚರ್ಚೆಗೆ ಬನ್ನಿ ಎಂದು ಹೇಳುತ್ತಾರೆ. ಇವರ ಜತೆ ನಾನು ಚರ್ಚೆ ಮಾಡುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು. ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಅವರ ಸಾಧನೆಯನ್ನು ವಿಶ್ವವೇ ಕೊಂಡಾಡುತ್ತಿದೆ. ರಾಷ್ಟ್ರೀಯ ಭದ್ರತೆ, ಹಣಕಾಸು, ಕೈಗಾರಿಕೆ, ವಿದೇಶಾಂಗ ವ್ಯವಹಾರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಅದ್ವಿತೀಯ ಸಾಧನೆ ಮಾಡಿದ್ದಾರೆ. ಎಂದೂ ಕೂಡ ವಿರೋಧ ಪಕ್ಷದ ನಾಯಕರನ್ನು ಬಹಿರಂಗವಾಗಿ ಚರ್ಚೆಗೆ ಆಹ್ವಾನಿಸುವುದಿಲ್ಲ. ಆದರೆ, ಎಲ್ಲಾ ರಂಗಗಳಲ್ಲೂ ವಿಫಲವಾಗಿರುವ ಸಿದ್ದರಾಮಯ್ಯ ಪ್ರಧಾನಿಯನ್ನೇ ಚರ್ಚೆಗೆ ಬನ್ನಿ ಎನ್ನುವುದು ಮೂರ್ಖತನದ ಪರಮಾವಧಿ ಎಂದು ಬಿಎಸ್‍ವೈ ಟೀಕಿಸಿದ್ದಾರೆ.

ನೀವು ಮುಖ್ಯಮಂತ್ರಿ ಆದ ದಿನದಿಂದಲೂ ಬರಗಾಲ ಆವರಿಸಿದೆ. ಇಂತಹ ವ್ಯಕ್ತಿಯ ಜತೆ ನಾನು ಚರ್ಚೆ ಮಾಡುವುದು ಒಂದೆ, ಗೋಡೆಗೆ ತಲೆ ಚೆಚ್ಚಿಕೊಳ್ಳುವುದು ಒಂದೇ ಎಂದು ಅವರು ವ್ಯಂಗ್ಯವಾಡಿದರು. ಮಂಗಳೂರು ಗಲಭೆಗೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ. ಗುಪ್ತಚರ ಇಲಾಖೆ ಸರ್ಕಾರದ ಅಧೀನದಲ್ಲಿದ್ದರೂ ನಡೆಯಬಹುದಾದ ಘಟನೆಯನ್ನು ತಪ್ಪಿಸಲು ವಿಫಲವಾಗಿದ್ದೇ ಇಷ್ಟು ದೊಡ್ಡ ಅನಾಹುತ ನಡೆಯಲು ಸಾಧ್ಯವಾಯಿತು. ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಇರುವವರೆಗೂ ನಿಶ್ಪಪಕ್ಷಪಾತವಾಗಿ ಕೆಲಸ ಮಾಡಲು ಸಾಧ್ಯವಾಗದೆ ಸ್ವಯಂ ನಿವೃತ್ತಿ ಪಡೆದಿರುವ ಇವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin