ಲೈಂಗಿಕ ದೌರ್ಜನ್ಯ ಸಂತ್ರಸ್ತೆ ಹೆಸರು ಬಹಿರಂಗಪಡಿಸಿದರಲ್ಲಿ ತಪ್ಪಲ್ಲ : ಕಮಲ್

Kamal-Hassna--01

ಚೆನ್ನೈ,ಜು.14- ಮಲಯಾಳಂ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಮಿಳು ಚಿತ್ರರಂಗದ ಖ್ಯಾತ ನಟ ಕಮಲï ಹಾಸನ್ ಹೇಳಿದ್ದಾರೆ. ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಸುದ್ದಿಗಾರರಗೊಂದಿಗೆ ಮಾತನಾಡುತ್ತಿದ್ದ ಕಮಲ್ , ನಟಿಯ ಹೆಸರನ್ನು ಬಹಿರಂಗಪಡಿಸಿದರು. ಈ ವೇಳೆ ನಟಿಯ ಹೆಸರನ್ನು ಬಹಿರಂಗ ಪಡಿಸಿದ್ದರ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಂತ್ರಸ್ತೆ ಹೆಸರನ್ನು ಬಹಿರಂಗಪಡಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಜನರಿಗೆ ಸಂತ್ರಸ್ತೆಯ ಹೆಸರು ತಿಳಿಯಬೇಕಿದೆ ಎಂದು ಹೇಳಿದ್ದಾರೆ.

ಚಿತ್ರರಂಗದಲ್ಲಿ ಒಂದರಲ್ಲಿಯೇ ಮಹಿಳೆಯರಿಗೆ ಸುರಕ್ಷತೆ ಏಕೆ ಬೇಕು? ಜನರ ಗುಂಪಿನಲ್ಲಿರುವ ಮಹಿಳೆಯರೂ ಕೂಡ ನನಗೆ ಮುಖ್ಯವಾಗುತ್ತಾರೆ. ಅವರಿಗೆ ಯಾವುದೇ ಸಮಸ್ಯೆಯಾಗಲು ನಾನು ಬಿಡುವುದಿಲ್ಲ. ನಾವು ಸುರಕ್ಷಿತರಾಗಿದ್ದೇವೆಯೇ, ಇಲ್ಲವೇ ಎಂಬುದನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿರುತ್ತದೆ. ಇದು ಕೇವಲ ನಟಿ ಎಂಬ ಮಾತ್ರಕ್ಕಷ್ಟೇ ಇಲ್ಲ. ನಟಿ ಎಂದ ಮಾತ್ರಕ್ಕೆ ನಾನು ಸಂತ್ರಸ್ತೆಗೆ ಬೆಂಬಲ ನೀಡುತ್ತಿಲ್ಲ.

ಇದೇ ವೇಳೆ ನಟಿಯ ಹೆಸರನ್ನು ಬಹಿರಂಗ ಪಡಿಸಿದ್ದಕ್ಕೆ ಉತ್ತರಿಸಿದ ಅವರು, ಸಂತ್ರಸ್ತೆ ಹೆಸರನ್ನು ಬಳಕೆ ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ. ಮಾಧ್ಯಮಗಳೇ ಆಕೆಯ ಹೆಸರನ್ನು ಬಹಿರಂಗಪಡಿಸಿವೆ. ಹೆಸರನ್ನು ಮುಚ್ಚಿಡುವುದರಿಂದ, ಹೆಸರನ್ನು ಬಹಿರಂಗ ಪಡಿಸುವುದರಿಂದ ಯಾವ ತಪ್ಪೂಇಲ್ಲ. ದ್ರೌಪದಿ ಎಂದು ಕರೆಯಬೇಕಿದ್ದರೆ, ಆ ಹೆಸರನ್ನೇ ಕರೆಯಿರಿ. ಆದರೆ, ಆಕೆಯನ್ನು ಮಹಿಳೆಯೆಂದು ಮಾತ್ರ ಬಿಂಬಿಸಬೇಡಿ ಎಂದು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin