ವರ್ಗಾವಣೆ ಕೋರಿ ಸಚಿವರಿಗೆ ಪತ್ರ ಬರೆದ ಗ್ರಾಮ ಲೆಕ್ಕಿಗನಿಗೆ ಅಮಾನತು ಶಿಕ್ಷೆ

Transfer--01

ತುಮಕೂರು, ಜು.14-ವರ್ಗಾವಣೆ ಕೋರಿ ಸಚಿವರಿಗೆ ಪತ್ರ ಬರೆದು ಗ್ರಾಮ ಲೆಕ್ಕಿಗರೊಬ್ಬರು ಅಮಾನತು ಶಿಕ್ಷೆಗೊಳಗಾಗಿದ್ದಾರೆ. ಲಕ್ಷ್ಮೀಪತಿ ಅಮಾನತಾದ ಗ್ರಾಮ ಲೆಕ್ಕಿಗ. ತುಮಕೂರು ಜಿಲ್ಲೆ ತಿಪಟೂರಿನ ತಾಲೂಕಿನ ದಸರಿಕಟ್ಟೆಯಲ್ಲಿ ಗ್ರಾಮ ಲೆಕ್ಕಿಕರಾದ ಇವರು ತಮ್ಮ ನೋವು ಹೇಳಿಕೊಂಡು ಸಚಿವರಿಗೆ ಪತ್ರ ಬರೆದ ಪರಿಣಾಮ ಸಸ್ಪೆಂಡ್ ಆಗಿದ್ದಾರೆ.
ಪೊಷಕರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿಗೆ ವರ್ಗಾವಣೆ ಮಾಡುವಂತೆ ಕೋರಿ ಸಚಿವರಿಗೆ ನೇರವಾಗಿ ಪತ್ರ ಬರೆದಿದ್ದರು. ಇದರಿಂದ ಕುಪಿತಗೊಂಡ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕೂಡಲೇ ಇವರನ್ನು ಅಮಾನತು ಮಾಡುವಂತೆ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದರು. ಈ ಸೂಚನೆಯಂತೆ ಲಕ್ಷ್ಮೀಪತಿಯನ್ನು ಜಿಲ್ಲಾಧಿಕಾರಿಗಳು ಅಮಾನತು ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin